ಜೆರ್ಸಿ ಕಲರ್ ನದ್ದೇ ಕಾರು ಖರೀದಿಸಿದ ರೋಹಿತ್ ಶರ್ಮಾ

ಗುರುವಾರ, 3 ಮಾರ್ಚ್ 2022 (09:30 IST)
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ತಂಡದ ಸಮವಸ್ತ್ರದ ಬಣ್ಣದ್ದೇ ಐಷಾರಾಮಿ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ.

ರೋಹಿತ್ ಐಷಾರಾಮಿ ಲ್ಯಾಂಬೋರ್ಗಿನಿ ಖರೀದಿಸಿದ್ದು, ಈ ಕಾರಿನ ಆರಂಭಿಕ ಬೆಲೆಯೇ 3.15 ಕೋಟಿ ರೂ.ಗಳಷ್ಟಿದೆ. ಅದೂ ತಮ್ಮ ಸಮವಸ್ತ್ರದ ಕಲರ್ ನಲ್ಲಿರುವ ಕಾರನ್ನೇ ರೋಹಿತ್ ಖರೀದಿಸಿರುವುದು ವಿಶೇಷ.

ದೇಶದ ಕೆಲವೇ ಸೆಲೆಬ್ರಿಟಿಗಳ ಬಳಿ ಈ ಕಾರಿದೆ. ಅವರಲ್ಲಿ ಅಂಬಾನಿ, ರೋಹಿತ್ ಶೆಟ್ಟಿ, ರಣವೀರ್ ಸಿಂಗ್ ಮುಂತಾದವರು ಪ್ರಮುಖರು. ಈಗ ರೋಹಿತ್ ಕೂಡಾ ಈ ಐಷಾರಾಮಿ ಕಾರನ್ನು ತಮ್ಮದಾಗಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ