ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಇಂಗ್ಲೆಂಡ್ ನಾಯಕ ಅಲಸ್ಟೈರ್ ಕುಕ್ ತಮ್ಮ 10,000ನೇ ಟೆಸ್ಟ್ ರನ್ ದಾಖಲೆ ಮುಗಿಸುವುದಕ್ಕೆ ಇನ್ನೂ ಕಾಯುತ್ತಿದ್ದು, ಮಹತ್ವದ ಮೈಲಿಗಲ್ಲು ಮುಟ್ಟಲು ಇನ್ನೂ 5 ರನ್ ಕೊರತೆ ಅನುಭವಿಸಿದ್ದಾರೆ.
ಎಡಗೈ ಓಪನರ್ 10,000 ರನ್ ಪೂರೈಸಿದ 12ನೇ ಆಟಗಾರ ಮತ್ತು ಮೊದಲ ಇಂಗ್ಲಿಷ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು 20 ರನ್ ಅಗತ್ಯವಿತ್ತು. 10,000 ರನ್ ಪೂರೈಸಿದ ಅತೀ ಕಿರಿಯ ಆಟಗಾರ ಎಂಬ ಸಚಿನ್ ದಾಖಲೆಯನ್ನು ಮುರಿಯುವುದರಿಂದ ಕುಕ್ ಮಿಸ್ ಆಗಿದ್ದಾರೆ.