ಬಿಸಿಸಿಐನ ಟಾಪ್ ಹುದ್ದೆಯು ಶಶಾಂಕ್ ಮನೋಹರ್ ರಾಜೀನಾಮೆ ನೀಡಿ ಐಸಿಸಿ ಅಧ್ಯಕ್ಷರಾದ ಮೇಲೆ ಖಾಲಿಯಾಗಿ ಉಳಿದಿತ್ತು. ಪ್ರಸಕ್ತ ನಮ್ಮ ತಂಡವು ಟೆಸ್ಟ್‌ಗಳಲ್ಲಿ ಮತ್ತು ಟಿ 20ಯಲ್ಲಿ ನಂಬರ್ 2 ಸ್ಥಾನದಲ್ಲಿದ್ದು, ಏಕದಿನ ಪಂದ್ಯಗಳಲ್ಲಿ ಮತ್ತು ಮಹಿಳಾ ಕ್ರಿಕೆಟ್‌ನಲ್ಲಿ ನಂಬರ್ 4 ಸ್ಥಾನದಲ್ಲಿದೆ ಎಂದು ಠಾಕುರ್ ತಿಳಿಸಿದರು.
ಮೂವರು ಬಿಸಿಸಿಐ ಮುಖ್ಯಸ್ಥರಾದ ಜಗಮೋಹನ್ ದಾಲ್ಮಿಯಾ, ಎನ್. ಶ್ರೀನಿವಾಸನ್ ಮತ್ತು ಮನೋಹರ್ ಅವರಿಂದ ತಾವು ಕಲಿತ ಅದೃಷ್ಟಶಾಲಿ ಎಂದು ಠಾಕುರ್ ಹೇಳಿದರು. ಮಂಡಳಿಯಲ್ಲಿ ಬದಲಾವಣೆಗೆ ಸುಪ್ರೀಂಕೋರ್ಟ್ ಒತ್ತಡ ಹಾಕಿದ ಸಂದರ್ಭದಲ್ಲೇ ಅವರು ಅಧಿಕಾರ ವಹಿಸಿಕೊಂಡರು. ಕಳೆದ 15 ವರ್ಷಗಳಲ್ಲಿ ನಾವು ಅನೇಕ ಸುಧಾರಣೆಗಳನ್ನು ತಂದಿದ್ದು ಅದನ್ನು ಮತ್ತಷ್ಟು ಬಲಪಡಿಸುತ್ತೇವೆ. ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ವೃತ್ತಿಪರತೆ ಬಿಸಿಸಿಐನ ಕಾರ್ಯನಿರ್ವಹಣೆಯ ಭಾಗವಾಗಿದೆ ಎಂದು ಠಾಕುರ್ ಹೇಳಿದರು.