ಐಪಿಎಲ್‌ಗಾಗಿ ತನ್ನ ನೆಚ್ಚಿನ ಮಾಂಸಾಹಾರ, ಜಂಕ್‌ಫುಟ್‌ಗೆ ಗುಡ್‌ಬೈ ಹೇಳಿದ್ದ ವೈಭವ್‌ ಸೂರ್ಯವಂಶಿ

Sampriya

ಮಂಗಳವಾರ, 29 ಏಪ್ರಿಲ್ 2025 (14:17 IST)
Photo Courtesy X
ಜೈಪುರ:  ಗುಜರಾತ್‌ ಜೈಂಟ್ಸ್‌ ವಿರುದ್ಧ ಶತಕ ಸಿಡಿಸಿ ಸಾಲು ಸಾಲು ದಾಖಲೆಯನ್ನು ಬರೆದಿರುವ 14 ವರ್ಷದ ವೈಭವ್‌ ಸೂರ್ಯವಂಶಿ ಅವರ ಸಾಧನೆಯ ಹಿಂದೆ ಸಾಕಷ್ಟು ಪರಿಶ್ರಮ, ತ್ಯಾಗ ಅಡಿಗಿದೆ. ಅವರು ಐಪಿಎಲ್‌ಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಐಪಿಎಲ್‌ನಲ್ಲಿ ಮೂರನೇ ಪಂದ್ಯ ಆಡುತ್ತಿರುವ ವೈಭವ್‌ ಸೋಮವಾರ 35 ಎಸೆತಗಳಲ್ಲಿ 101 ರನ್‌ ಸಿಡಿಸಿದರು. ಅದರಲ್ಲಿ ಏಳು ಬೌಂಡರಿ ಮತ್ತು 11 ಸಿಕ್ಸರ್‌ಗಳು ಸೇರಿತ್ತು. ಹೀಗಾಗಿ ಗುಜರಾತ್‌ ಟೈಟನ್ಸ್‌ ವಿರುದ್ಧ ರಾಜಸ್ಥಾನ ರಾಯಲ್ಸ್‌ ತಂಡವು ಎಂಟು ವಿಕೆಟ್‌ಗಳಿಂದ ಗೆದ್ದು ಬೀಗಿತ್ತು.

ಈಗ ಎಲ್ಲರ ಬಾಯಲ್ಲೂ ಬಾಲಕ ವೈಭವ್‌ ಸೂರ್ಯವಂಶಿಯದ್ದೇ ಮಾತು.  ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಶಾರ್ದೂಲ್‌ ಠಾಕೂರ್‌ ಬೌಲಿಂಗ್‌ಗೆ ಮೊದಲ ಎಸೆತದಲ್ಲೇ ಸಿಕ್ಸರ್‌ ಸಿಡಿಸುವ ಮೂಲಕ ಐಪಿಎಲ್‌ಗೆ ಅದ್ಧೂರಿಯಾಗಿ ಪ್ರವೇಶ ಮಾಡಿದ್ದ ಈ ಪೋರ ಸೋಮವಾರ ಟೈಟನ್ಸ್‌ ತಂಡದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಅವರ ಆಟವನ್ನು ಕ್ರಿಕೆಟ್‌ ತಾರೆಯನ್ನ ಯುವ ಆಟಗಾರರನ್ನು ಕೊಂಡಿದ್ದಾರೆ.
 

ವೈಭಬ್‌ ಚಿಕನ್‌, ಮಟನ್‌, ಪಿಜ್ಜಾ ಅಂದ್ರೆ ಹೆಚ್ಚು ಪ್ರೀತಿ. ಎಷ್ಟು ಕೊಟ್ಟರೂ ಮುಗಿಸಿಬಿಡುತ್ತಿದ್ದರು.  ಆದ್ರೆ ಐಪಿಎಲ್‌ ಹತ್ತಿರ ಬರುತ್ತಿದ್ದಂತೆ ಮಟನ್‌, ಪಿಜ್ಜಾ ತಿನ್ನೋದನ್ನ ತ್ಯಜಿಸಿದ್ದ. ಅವನಿಗಾಗಿ ಡಯಟ್‌ ಚಾರ್ಚ್‌ ಪಾಲನೆ ಮಾಡಿದ್ದರು ಎಂದು ಆರ್‌ಆರ್‌ ತಂಡದ ಕೋಚ್‌ ಮನೋಜ್‌ ಓಜಾ ಹೇಳಿದ್ದಾರೆ.

ಮನೋಜ್ ಓಜಾ ತಮ್ಮ ಶಿಷ್ಯನ ಆಟವನ್ನು ಮುಕ್ತ ಕಂಠದಿಂದ ಕೊಂಡಾಡಿದ್ದಾರೆ. ಅವನು ಶತಕ ಹೊಡೆಯುತ್ತಾನೆ ಎಂದು ಕನಸಲ್ಲೂ ಊಹಿಸಿರಲಿಲ್ಲ. ಅವನಿನ್ನೂ 14 ವರ್ಷದ ಹುಡುಗ, ದೇವರು ಅವನಿಗೆ ಅಪಾರ ಪ್ರತಿಭೆ ನೀಡಿದ್ದಾನೆ. ಅವನ ವೃತ್ತಿಜೀವನದಲ್ಲಿ ನಾನೂ ಭಾಗಿಯಾಗಲು ಸಾಧ್ಯವಾಗಿರುವುದಕ್ಕೆ ನಿಜವಾಗಿಯೂ ಖುಷಿಯಾಗಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ