Virat Kohli video: ಸದ್ಯ ನೀವು ಔಟಾಗಿದ್ದೇ ಒಳ್ಳೇದಾಯ್ತು.. ಕಾಂತಾರ ಸೆಲೆಬ್ರೇಷನ್ ಮಾಡಿದ್ದ ಕೊಹ್ಲಿಗೆ ಕೆಎಲ್ ರಾಹುಲ್ ಹೇಳಿದ್ದೇನು ಬಹಿರಂಗ

Krishnaveni K

ಮಂಗಳವಾರ, 29 ಏಪ್ರಿಲ್ 2025 (10:52 IST)
ನವದೆಹಲಿ: ಐಪಿಎಲ್ 2025 ನಿನ್ನೆಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಗೆಲುವು ಸಾಧಿಸಿದ ಬಳಿಕ ಕೆಎಲ್ ರಾಹುಲ್ ಬಳಿ ಹೋಗಿ ವಿರಾಟ್ ಕೊಹ್ಲಿ ಕಾಂತಾರ ಸ್ಟೈಲ್ ನಲ್ಲಿ ಸೆಲೆಬ್ರೇಷನ್ ಮಾಡಿ ಠಕ್ಕರ್ ಕೊಟ್ಟಿದ್ದರು. ಈ ವೇಳೆ ಕೆಎಲ್ ರಾಹುಲ್ ಸದ್ಯ ನೀವು ಔಟಾಗಿದ್ದೇ ಒಳ್ಳೇದಾಯ್ತು ಎಂದಿದ್ದಾರೆ. ಅವರ ನಡುವಿನ ಮಾತುಕತೆ ವಿಡಿಯೋ ಈಗ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ಆರ್ ಸಿಬಿಯನ್ನು ಸೋಲಿಸಿದ ಬಳಿಕ ಕೆಎಲ್ ರಾಹುಲ್ ಕಾಂತಾರ ಸ್ಟೈಲ್ ನಲ್ಲಿ ವೃತ್ತ ಎಳೆದು ಸೆಲೆಬ್ರೇಷನ್ ಮಾಡಿದ್ದರು. ಇದಕ್ಕೆ ಕೊಹ್ಲಿ ಡೆಲ್ಲಿಯಲ್ಲಿ ತಿರುಗೇಟು ನೀಡಲಿದ್ದಾರೆ ಎಂದು ಎಲ್ಲರೂ ಅಂದುಕೊಂಡಿದ್ದರು.

ಅದರಂತೆ ಪಂದ್ಯ ಮುಗಿದ ಬಳಿಕ ಕೊಹ್ಲಿ ಬೇಕೆಂದೇ ಕೆಎಲ್ ರಾಹುಲ್ ಬಳಿ ಹೋಗಿ ಅದೇ ರೀತಿ ಸೆಲೆಬ್ರೇಷನ್ ಮಾಡಿದ್ದರು. ‘ನಾನು ಅಂದುಕೊಂಡಿದ್ದೆ ಮ್ಯಾಚ್ ಫಿನಿಶ್ ಮಾಡಿ ನಿನ್ನ ಎದುರು ಹೀಗೆ ಸೆಲೆಬ್ರೇಷನ್ ಮಾಡಬೇಕು ನಂತರ ನಿನ್ನನ್ನು ಬಂದು ಅಪ್ಪಿಕೊಳ್ಳಬೇಕು’ ಎಂದು ಕೊಹ್ಲಿ ವೃತ್ತ ಎಳೆಯುವಂತೆ ಮಾಡಿ ರಾಹುಲ್ ಕಾಲೆಳೆಯುತ್ತಾರೆ.

ಇದಕ್ಕೆ ರಾಹುಲ್ ‘ಒಳ್ಳೆದಾಯ್ತು ನೀವು ಔಟಾಗಿದ್ದು’ ಎಂದು ತಮಾಷೆ ಮಾಡುತ್ತಾರೆ. ಕೊಹ್ಲಿಯ ಈ ವಿಡಿಯೋ ಈಗ ವೈರಲ್ ಆಗಿದ್ದು, ಇಲ್ಲಿದೆ ನೋಡಿ.

That “achha hua out ho gaya” from KL ???????? pic.twitter.com/OGFB4AQ4Lx

— Delhi Capitals (@DelhiCapitals) April 28, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ