ಗಂಡನ ಜೊತೆ ದೀಪಾವಳಿ ಆಚರಿಸಲು ಬೆಂಗಳೂರಿಗೆ ಬಂದ ಅನುಷ್ಕಾ ಶರ್ಮಾ
ಈ ವಾರಂತ್ಯಕ್ಕೆ ದೀಪಾವಳಿ ಹಬ್ಬವಿದ್ದು, ಕ್ರಿಕೆಟಿಗರಿಗೆ ಆಟದ ಜೊತೆಗೆ ಬೆಂಗಳೂರಿನಲ್ಲಿ ದೀಪಾವಳಿ ಸಂಭ್ರಮಾಚರಿಸುವ ಯೋಗ. ಇದೇ ಕಾರಣಕ್ಕೆ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಪತಿಯ ಜೊತೆ ದೀಪಾವಳಿ ಹಬ್ಬ ಆಚರಿಸಲು ಬೆಂಗಳೂರಿಗೆ ಬಂದಿಳಿದಿದ್ದಾರೆ.
ಕೊಹ್ಲಿ ಈಗಾಗಲೇ ತಂಡದ ಸಹ ಆಟಗಾರರಿಗಿಂತ ಮೊದಲು ಬೆಂಗಳೂರಿಗೆ ಓಡೋಡಿ ಬಂದಿದ್ದರು. ಅವರ ಬೆನ್ನಲ್ಲೇ ಅನುಷ್ಕಾ ಕೂಡಾ ಬೆಂಗಳೂರಿಗೆ ಬಂದಿದ್ದಾರೆ. ಈ ವಾರಂತ್ಯದಲ್ಲಿ ನಡೆಯುವ ಭಾರತ-ನೆದರ್ಲ್ಯಾಂಡ್ಸ್ ಪಂದ್ಯದಲ್ಲಿ ಪತಿಗೆ ಚಿಯರ್ ಅಪ್ ಮಾಡುವುದರ ಜೊತೆಗೆ ದೀಪಾವಳಿಯನ್ನೂ ಒಟ್ಟಿಗೇ ಆಚರಿಸಿಕೊಳ್ಳಲಿದ್ದಾರೆ.