ಕೊಹ್ಲಿ ಶತಕ ವೀಕ್ಷಣೆಯಲ್ಲೂ ದಾಖಲೆ

ಸೋಮವಾರ, 6 ನವೆಂಬರ್ 2023 (11:47 IST)
ಕೋಲ್ಕೊತ್ತಾ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ದ.ಆಫ್ರಿಕಾ ವಿರುದ್ಧ ಜನ್ಮದಿನಂದು ಶತಕ ಸಿಡಿಸಿದ ವಿರಾಟ್ ಕೊಹ್ಲಿ ಇನಿಂಗ್ಸ್ ನ್ನು ಅನೇಕರು ಕಣ್ತುಂಬಿಕೊಂಡಿದ್ದಾರೆ.

ನಿನ್ನೆ ಕೊಹ್ಲಿಯ ಇನಿಂಗ್ಸ್ ನೋಡಲೆಂದೇ ಮೈದಾನ ಭರ್ತಿಯಾಗಿತ್ತು. ಅಷ್ಟೇ ಅಲ್ಲದೆ, ಮೊಬೈಲ್ ಆಪ್, ಟಿವಿ ಮುಂದೆಯೂ ಕೋಟ್ಯಾಂತರ ವೀಕ್ಷಕರು ಈ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ.

ಕೊಹ್ಲಿ ಶತಕ ಸಿಡಿಸುವಾಗ 4.4 ಕೋಟಿ ವೀಕ್ಷಕರು ಹಾಟ್ ಸ್ಟಾರ್ ಆಪ್ ನಲ್ಲಿ ಪಂದ್ಯ ವೀಕ್ಷಿಸುತ್ತಿದ್ದರು. ಮೊಬೈಲ್ ಆಪ್ ನಲ್ಲಿ ಇಷ್ಟೊಂದು ಜನ ವೀಕ್ಷಣೆ ಮಾಡಿದ್ದು ವಿಶೇಷವೇ. ಹೀಗಾಗಿ ಕೊಹ್ಲಿ ಶತಕ ಗಳಿಸುವ ಕ್ಷಣದಲ್ಲಿ ವೀಕ್ಷಣೆಯಲ್ಲೂ ದಾಖಲೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ