ದ್ವಿತೀಯ ಟಿ20 ಪಂದ್ಯಕ್ಕೆ ವಿರಾಟ್ ಕೊಹ್ಲಿಗೆ ಚಿಯರ್ ಅಪ್ ಮಾಡಲು ಬಂದ ವಿಶೇಷ ವ್ಯಕ್ತಿ ಯಾರು ಗೊತ್ತಾ?

ಗುರುವಾರ, 5 ಜುಲೈ 2018 (09:24 IST)
ಕಾರ್ಡಿಫ್: ಟೀಂ ಇಂಡಿಯಾ ನಾಳೆ ಕಾರ್ಡಿಫ್ ನಲ್ಲಿ ಇಂಗ್ಲೆಂಡ್ ವಿರುದ್ಧ ದ್ವಿತೀಯ ಟಿ20 ಪಂದ್ಯವಾಡಲಿದ್ದು, ಟೀಂ ಇಂಡಿಯಾ ಈಗಾಗಲೇ ಇಲ್ಲಿಗೆ ಬಂದಿಳಿದಿದೆ.

ಮೊದಲ ಟಿ20 ಪಂದ್ಯ ಗೆದ್ದ ಖುಷಿಯಲ್ಲಿರುವ ವಿರಾಟ್ ಕೊಹ್ಲಿ ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ತಮ್ಮ ತಂಡವನ್ನು ಚಿಯರ್ ಅಪ್ ಮಾಡಲು ವಿಶೇಷ ವ್ಯಕ್ತಿಯನ್ನೇ ಕರೆ ತಂದಿದ್ದಾರೆ.

ಅವರು ಬೇರಾರೂ ಅಲ್ಲ, ಕೊಹ್ಲಿ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ. ಕಾರ್ಡಿಫ್ ಕಡೆಗೆ ಟೀಂ ಇಂಡಿಯಾ ಬಸ್ ನಲ್ಲಿ ಪ್ರಯಾಣಿಸುತ್ತಿರಬೇಕಾದರೆ ಕೊಹ್ಲಿ ಪಕ್ಕದಲ್ಲಿ ಅನುಷ್ಕಾ ಇದ್ದರು. ದ್ವಿತೀಯ ಪಂದ್ಯದ ವೇಳೆ ಅನುಷ್ಕಾ ಟೀಂ ಇಂಡಿಯಾಕ್ಕೆ ಚಿಯರ್ ಅಪ್ ಮಾಡಲು ಮೈದಾನದಲ್ಲಿ ಉಪಸ್ಥಿತರಿಸುವುದು ಪಕ್ಕಾ ಆಗಿದೆ.

ತಮ್ಮ ಬಾಲಿವುಡ್ ಸಿನಿಮಾ ಶೂಟಿಂಗ್ ಮುಗಿಸಿ ಇದೀಗ ಪತಿ ಕೊಹ್ಲಿ ಜತೆಗಿರಲು ಇಂಗ್ಲೆಂಡ್ ಗೆ ಬಂದಿಳಿದಿರುವ ಅನುಷ್ಕಾ ಮುಂದಿನ ಕೆಲವು ದಿನಗಳವರೆಗೆ ಟೀಂ ಇಂಡಿಯಾ ಜತೆಗಿರಲಿದ್ದಾರೆ ಎನ್ನಲಾಗಿದೆ.












ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ