ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾ ಪ್ರಾಕ್ಟೀಸ್ ಗೆ ನೆರವಾಗುತ್ತಿರುವುದು ‘ಪ್ಲಾಸ್ಟಿಕ್’!

ಬುಧವಾರ, 4 ಜುಲೈ 2018 (08:56 IST)
ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಈಗಾಗಲೇ ಮೊದಲ ಟಿ20 ಪಂದ್ಯವನ್ನು ಆಡಿ ಮುಗಿಸಿದ್ದಾಗಿದೆ. ಈ ಮಹತ್ವದ ಸರಣಿಗೆ ತಯಾರಾಗಲು ಟೀಂ ಇಂಡಿಯಾ ಕ್ರಿಕೆಟಿಗರಿಗೆ ನೆರವಾಗುತ್ತಿರುವುದು ‘ಪ್ಲಾಸ್ಟಿಕ್’ ಎಂದರೆ ನೀವು ನಂಬಲೇ ಬೇಕು!

ಶಿಖರ್ ಧವನ್ ಸೇರಿದಂತೆ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ನೆಟ್ ಪ್ರಾಕ್ಟೀಸ್ ಸಂದರ್ಭ ಭಾರದ ‘ಪ್ಲಾಸ್ಟಿಕ್’  ಬಾಲ್ ಬಳಸಿ ಶಾರ್ಟ್ ಪಿಚ್ ಎಸೆತದಲ್ಲಿ ಆಡಲು ಅಭ್ಯಾಸ ನಡೆಸುತ್ತಿದ್ದಾರೆ.

ಸಿಮೆಂಟ್ ಪಿಚ್ ಗಳ ಮೇಲೆ ಈ ಪ್ಲಾಸ್ಟಿಕ್ ಬಾಲ್ ನಲ್ಲಿ ಆಡುವಾಗ ಅದು ಅಗತ್ಯಕ್ಕಿಂತ ಹೆಚ್ಚು ಪುಟಿಯುತ್ತದೆ. ಇದರಿಂದ ಇಂಗ್ಲೆಂಡ್ ನ ಮೈದಾನಗಳಲ್ಲಿ ಪುಟಿಯುವ ಬಾಲ್ ಗಳನ್ನು ಆಡುವುದು ಸುಲಭವಾಗಬಹುದು ಎಂಬ ಲೆಕ್ಕಾಚಾರ ಭಾರತೀಯ ಬ್ಯಾಟ್ಸ್ ಮನ್ ಗಳದ್ದು. ಹೇಗಿದೆ ಐಡಿಯಾ?!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ