ಅಪ್ಪ ಸಚಿನ್ ತೆಂಡುಲ್ಕರ್ ರನ್ನೇ ಕಾಪಿ ಮಾಡಿದ ಪುತ್ರ ಅರ್ಜುನ್!
ಗುರುವಾರ, 19 ಜುಲೈ 2018 (14:33 IST)
ಕೊಲೊಂಬೋ: ತಂದೆಗೆ ತಕ್ಕ ಮಗ ಎನ್ನುವುದನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ನಿರೂಪಿಸಿದ್ದಾನೆ.
ಇದೇ ಮೊದಲ ಬಾರಿಗೆ ಅಂಡರ್ 19 ತಂಡಕ್ಕೆ ಆಯ್ಕೆಯಾಗಿರುವ ಅರ್ಜುನ್ ತೆಂಡುಲ್ಕರ್, ಮೊದಲ ಬಾರಿ ಅಂತಾರಾಷ್ಟ್ರೀಯ ಪಂದ್ಯವಾಡುತ್ತಿದ್ದಾರೆ. ಶ್ರೀಲಂಕಾ ವಿರುದ್ಧ ಕೊಲೊಂಬೋದಲ್ಲಿ ನಡೆಯುತ್ತಿರುವ ತ್ರಿದಿನ ಪಂದ್ಯದಲ್ಲಿ ಅರ್ಜುನ್ ತೆಂಡುಲ್ಕರ್ ಶೂನ್ಯಕ್ಕೆ ಔಟಾಗಿದ್ದಾರೆ.
11 ಎಸೆತ ಎದುರಿಸಿದ ಅರ್ಜುನ್ ತೆಂಡುಲ್ಕರ್ ಶಶಿಕಾ ದುಲ್ಶನ್ ಬೌಲಿಂಗ್ ನಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಈ ಮೂಲಕ ಸಚಿನ್ ರನ್ನು ನೆನಪಿಸಿದ್ದಾರೆ. ಸಚಿನ್ ಕೂಡಾ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಏಕದಿನ ಪಂದ್ಯವಾಡಿದ್ದಾಗ ಶೂನ್ಯಕ್ಕೇ ಔಟಾಗಿದ್ದರು. ಇದೀಗ ಪುತ್ರ ಅರ್ಜುನ್ ಕೂಡಾ ಅಪ್ಪನನ್ನೇ ಕಾಪಿ ಮಾಡಿದ್ದಾರೆ. ಆದರೆ ಅಪ್ಪನ ಹಾಗೆ ದಿಗ್ಗಜ ಕ್ರಿಕೆಟಿಗನಾಗುವುದು ಅಷ್ಟು ಸುಲಭವಲ್ಲ ಬಿಡಿ. ಬ್ಯಾಟಿಂಗ್ ನಲ್ಲಿ ಶೂನ್ಯ ಸಂಪಾದನೆ ಮಾಡಿದರೂ ಬೌಲಿಂಗ್ ನಲ್ಲಿ ಅರ್ಜುನ್ ಒಂದು ವಿಕೆಟ್ ಕಿತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.