ಕೊಹ್ಲಿ ಎದುರು ಬ್ಯಾಟ್ ಬಿಸಾಕಿದ ಜೋ ರೂಟ್: ತಿರುಗೇಟು ನೀಡದೇ ಬಿಡ್ತಾರಾ ವಿರಾಟ್?!

ಗುರುವಾರ, 19 ಜುಲೈ 2018 (10:02 IST)
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ಒಂದು ವಿಶಿಷ್ಟ ರೀತಿಯ ವೈರತ್ವ 2002 ರ ನ್ಯಾಟ್ ವೆಸ್ಟ್ ಸರಣಿಯಿಂದಲೇ ಮುಂದುವರಿದಿದೆ. ಅದಕ್ಕೆ ಹೊಸ ರೂಪ ಈ ಬಾರಿ ನಡೆಯುತ್ತಿರುವ ಇಂಗ್ಲೆಂಡ್ ಸರಣಿಯಲ್ಲಿ ಶುರುವಾಗಿದೆ.

ಗಂಗೂಲಿ ಲಾರ್ಡ್ಸ್ ನಲ್ಲಿ ಶರ್ಟ್ ಬಿಚ್ಚಿದ್ದಕ್ಕೆ ಇಂಗ್ಲೆಂಡ್ ನ ಆಂಡ್ರ್ಯೂ ಫ್ಲಿಂಟಾಫ್ ಮುಂಬೈನಲ್ಲಿ ಶರ್ಟ್ ಬಿಚ್ಚಿ ಗೆಲುವು ಆಚರಿಸಿ ತಿರುಗೇಟು ಕೊಟ್ಟಿದ್ದರು. ಇದೀಗ ಮೊನ್ನೆ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನ ಜೋ ರೂಟ್ ಶತಕ ಗಳಿಸಿದ ಮೇಲೆ ಬೇಕೆಂದೇ ವಿರಾಟ್ ಕೊಹ್ಲಿ ಎದುರು ಬ್ಯಾಟ್ ಬಿಸಾಕಿ ಸಂಭ್ರಮಿಸಿದ್ದರು.

ಇದು ಇನ್ನೊಂದು ವೈರತ್ವಕ್ಕೆ ನಾಂದಿ ಹಾಡಿದೆ. ಮೊದಲೇ ವಿರಾಟ್ ಕೊಹ್ಲಿ ಏಟಿಗೆ ಎದಿರೇಟು ಕೊಡುವುದರಲ್ಲಿ ನಿಸ್ಸೀಮ. ಕೊಹ್ಲಿ ಫಾರ್ಮ್ ಕೂಡಾ ಕಳಪೆಯಾಗೇನೂ ಇಲ್ಲ. ಹಾಗಿರುವಾಗ ಮುಂಬರುವ ಟೆಸ್ಟ್ ಸರಣಿಯಲ್ಲಿ ಕೊಹ್ಲಿಯಿಂದ ರೂಟ್ ಗೆ ತಿರುಗೇಟು ಸಿಗುವುದರಲ್ಲಿ ಅನುಮಾನವಿಲ್ಲ.

ಸದ್ಯಕ್ಕೆ ಇಬ್ಬರೂ ವಿಶ್ವದ ಅತ್ಯುತ್ತಮ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಪೈಪೋಟಿ ನಡೆಸುತ್ತಿದ್ದಾರೆ. ಹೀಗಾಗಿ ಬ್ಯಾಟಿಂಗ್ ನಲ್ಲೂ ಈ ಜಿದ್ದು ಉಳಿಸಿಕೊಂಡು ಕೊಹ್ಲಿ ರೂಟ್ ಗೆ ಯಾವ ರೀತಿ ತಿರುಗೇಟು ಕೊಡಲಿದ್ದಾರೆ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ