ಏಷ್ಯಾ ಕಪ್ ಹೆಸರಿನಲ್ಲಿ ಭಾರತ, ಪಾಕಿಸ್ತಾನ ಟಿ20 ಸರಣಿಯೇ ಆಗೋಯ್ತು: ಪಬ್ಲಿಕ್ ಆಕ್ರೋಶ

Krishnaveni K

ಶುಕ್ರವಾರ, 26 ಸೆಪ್ಟಂಬರ್ 2025 (09:59 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ಫೈನಲ್ ಗೇರುತ್ತಿದ್ದಂತೇ ಭಾರತೀಯರು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಂತೂ ಏಷ್ಯಾ ಕಪ್ ಹೆಸರಿನಲ್ಲಿ ಬಿಸಿಸಿಐ ಭಾರತ ಪಾಕಿಸ್ತಾನ ನಡುವೆ ಟಿ20 ಸರಣಿಯನ್ನೇ ಆಯೋಜಿಸಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ಬಾಂಗ್ಲಾದೇಶವನ್ನು ಸೋಲಿಸಿದ ಪಾಕಿಸ್ತಾನ ಏಷ್ಯಾ ಕಪ್ ಫೈನಲ್ ಗೇರಿದೆ. ಇದಕ್ಕೆ ಮೊದಲೇ ಪಾಕಿಸ್ತಾನ, ಬಾಂಗ್ಲಾದೇಶವನ್ನು ಸೋಲಿಸಿದ್ದ ಟೀಂ ಇಂಡಿಯಾ ಫೈನಲ್ ತಲುಪಿತ್ತು. ಇದೀಗ ಮೊದಲ ಬಾರಿಗೆ ಏಷ್ಯಾ ಕಪ್ ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗುವುದು ಪಕ್ಕಾ ಆಗಿದೆ.

ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನದ ಜೊತೆ ಏಷ್ಯಾ ಕಪ್ ನಲ್ಲಿ ಆಡುವುದೇ ಭಾರತೀಯ ಅಭಿಮಾನಿಗಳಿಗೆ ಇಷ್ಟವಿರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಬಹಿಷ್ಕಾರದ ಬಿಸಿಯೂ ಬಂದಿತ್ತು. ಇದರ ಹೊರತಾಗಿಯೂ ಈಗಾಗಲೇ ಎರಡು ಬಾರಿ ಏಷ್ಯಾ ಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಆಡಿದೆ.


ಇದೀಗ ಮತ್ತೆ ಮೂರನೇ ಬಾರಿಗೆ ಫೈನಲ್ ನೆಪದಲ್ಲಿ ಎರಡೂ ತಂಡಗಳು ಸೆಣಸಾಡಲಿವೆ. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಆಡಲ್ಲ ಆಡಲ್ಲ ಎನ್ನುತ್ತಲೇ ಮೂರನೇ ಬಾರಿಗೆ ಆಡ್ತಿದ್ದಾರೆ. ಅಂತೂ ಏಷ್ಯಾ ಕಪ್ ನೆಪ ಹೇಳಿಕೊಂಡು ಟಿ20 ಸರಣಿಯನ್ನೇ ಆಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಹಲ್ಗಾಮ್ ದಾಳಿ ಬಳಿಕ ಇಂತಹದ್ದೊಂದು ನಾಟಕ ಬೇಕಿತ್ತಾ ಎಂದು ಕಿಡಿ ಕಾರುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ