Asia Cup Cricket: ಪಾಕಿಸ್ತಾನ, ಬಾಂಗ್ಲಾ ಬಳಿಕ ಶ್ರೀಲಂಕಾ ಬಲಿ ಹಾಕಲು ಕಾಯ್ತಿದೆ ಟೀಂ ಇಂಡಿಯಾ

Krishnaveni K

ಶುಕ್ರವಾರ, 26 ಸೆಪ್ಟಂಬರ್ 2025 (09:22 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಅಜೇಯ ಓಟ ಮುಂದುವರಿಸಿರುವ ಟೀಂ ಇಂಡಿಯಾ ಇಂದು ಸೂಪರ್ ಫೋರ್ ಹಂತದ ಮೂರನೆಯ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಬಲಿ ಹಾಕಲು ಕಾಯುತ್ತಿದೆ.

ಈಗಾಗಲೇ ಸೂಪರ್ ಫೋರ್ ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಸೋಲಿಸಿರುವ ಟೀಂ ಇಂಡಿಯಾ ಫೈನಲ್ ಗೆ ಲಗ್ಗೆಯಿಟ್ಟಿದೆ. ಇಂದಿನ ಪಂದ್ಯದಲ್ಲಿ ಗೆದ್ದು ಫೈನಲ್ ಗೆ ಮೊದಲು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಉತ್ಸಾಹದಲ್ಲಿ ಟೀಂ ಇಂಡಿಯಾ ಇದೆ.

ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಕೆಲವು ಬದಲಾವಣೆಗಳಾಗುವ ನಿರೀಕ್ಷೆಯಿದೆ. ವಿಕೆಟ್ ಕೀಪರ್ ಆಗಿ ಜಿತೇಶ್ ಶರ್ಮಾಗೆ ಅವಕಾಶ ಸಿಕ್ಕರೂ ಅಚ್ಚರಿಯಿಲ್ಲ. ಬೌಲಿಂಗ್  ವಿಭಾಗದಲ್ಲಿ ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.

ಟೀಂ ಇಂಡಿಯಾಗೆ ಈ ಟೂರ್ನಿಯಲ್ಲಿ ಹೆಚ್ಚು ಕಾಡುತ್ತಿರುವುದು ಫೀಲ್ಡಿಂಗ್. ಎಲ್ಲಾ ಪಂದ್ಯಗಳಲ್ಲೂ ಕ್ಯಾಚ್ ಡ್ರಾಪ್ ಮಾಡುತ್ತಿರುವುದು ತಂಡಕ್ಕೆ ದೊಡ್ಡ ಸಮಸ್ಯೆಯಾಗಿದೆ. ಫೈನಲ್ ಪಂದ್ಯಕ್ಕೆ ಮೊದಲು ಈ ಹುಳುಕನ್ನು ಸರಿಪಡಿಸಬೇಕಿದೆ. ಅತ್ತ ಶ್ರೀಲಂಕಾ ಈಗಾಗಲೇ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ. ಲಂಕಾಗೆ ಈ ಪಂದ್ಯದಲ್ಲಿ ಗೆಲುವು-ಸೋಲು ಯಾವುದೇ ಲೆಕ್ಕಕ್ಕೆ ಬರಲ್ಲ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಆರಂಭವಾಗುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ