ಪಾಕಿಸ್ತಾನಕ್ಕೆ ಮಾತ್ರ ಈ ಅವಮಾನ ಮಾಡೋದು, ಬೇರೆ ತಂಡಗಳಿಗೆ ಟೀಂ ಇಂಡಿಯಾ ಫುಲ್ ರೆಸ್ಪೆಕ್ಟ್

Krishnaveni K

ಗುರುವಾರ, 25 ಸೆಪ್ಟಂಬರ್ 2025 (11:18 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಅನಿವಾರ್ಯವಾಗಿ ಪಂದ್ಯವಾಡಿದರೂ ಮೈದಾನದಲ್ಲಿ ಕೈಕುಲುಕದೇ, ಕಣ್ಣೆತ್ತಿಯೂ ನೋಡದೇ ಪಾಕ್ ಆಟಗಾರರಿಗೆ ಟೀಂ ಇಂಡಿಯಾ ಚೆನ್ನಾಗಿಯೇ ಅವಮಾನ ಮಾಡುತ್ತಿದೆ. ಆದರೆ ಈ ಅವಮಾನ ಪಾಕ್ ಆಟಗಾರರಿಗೆ ಮಾತ್ರ ಮೀಸಲು. ಬೇರೆ ತಂಡಗಳಿಗೆ ಟೀಂ ಇಂಡಿಯಾ ಫುಲ್ ಗೌರವ ಕೊಡುತ್ತಿದೆ.

ನಿನ್ನೆ ಬಾಂಗ್ಲಾದೇಶ ವಿರುದ್ಧದ ಪಂದ್ಯದ ಟಾಸ್ ವೇಳೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಎದುರಾಳಿ ನಾಯಕನ ಕೈಕುಲುಕಿ ಶುಭ ಹಾರೈಸಿದ್ದರು. ಇದಕ್ಕೆ ಮೊದಲು ನಡೆದಿದ್ದ ಒಮನ್, ಯುಎಇ ವಿರುದ್ಧದ ಪಂದ್ಯದಲ್ಲೂ ಟೀಂ ಇಂಡಿಯಾ ಆಟಗಾರರು ಕೈ ಕುಲುಕಿದ್ದರು.

ನಿನ್ನೆಯ ಪಂದ್ಯ ಮುಗಿದ ಬಳಿಕವೂ ಬಾಂಗ್ಲಾ ಆಟಗಾರರು ಮೈದಾನಕ್ಕೆ ಬಂದಾಗ ಸಾಲಾಗಿ ನಿಂತು ಎಂದಿನಂತೆಯೇ ಕೈ ಕುಲುಕಿ ಶುಭಾಶಯ ವಿನಿಮಯ ಮಾಡಿಕೊಂಡು ಟೀಂ ಇಂಡಿಯಾ ಆಟಗಾರರು ಎದುರಾಳಿಗಳಿಗೆ ಗೌರವ ನೀಡಿದ್ದಾರೆ.

ಇದನ್ನು ನೋಡಿ ನೆಟ್ಟಿಗರು ಅವಮಾನವೇನಿದ್ದರೂ ಕೇವಲ ಪಾಕಿಸ್ತಾನಕ್ಕೆ ಮಾತ್ರ ಮೀಸಲು ಎಂದು ಟ್ರೋಲ್ ಮಾಡಿದ್ದಾರೆ. ಪಾಕಿಸ್ತಾನ ಆಟಗಾರರ ಜೊತೆ ಈವರೆಗೆ ಆಡಿದ ಎರಡೂ ಪಂದ್ಯಗಳಲ್ಲಿ ಭಾರತೀಯ ಆಟಗಾರರು ಕೈಕುಲುಕಿಲ್ಲ. ಮುಂದೆ ಟ್ರೋಫಿ ಗೆದ್ದರೂ ಪಿಸಿಬಿ ಅಧ್ಯಕ್ಷ ನಖ್ವಿ ಕೈಯಿಂದ ಟ್ರೋಫಿಯನ್ನೂ ಸ್ವೀಕರಿಸಲ್ಲ ಎಂದು ನಿರ್ಧರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ