ಏಷ್ಯಾ ಕಪ್ ಕ್ರಿಕೆಟ್: ಫೈನಲ್ ನಲ್ಲಿ ಭಾರತ-ಲಂಕಾ ಅಂಕಿ ಅಂಶಗಳು

ಭಾನುವಾರ, 17 ಸೆಪ್ಟಂಬರ್ 2023 (08:50 IST)
Photo Courtesy: Twitter
ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ಇಂದು ಭಾರತ ಮತ್ತು ಶ್ರೀಲಂಕಾ ನಡುವೆ ಕೊಲೊಂಬೋದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆಯಲಿದೆ.

ಟೀಂ ಇಂಡಿಯಾ ಮತ್ತು ಶ್ರೀಲಂಕಾ ಫೈನಲ್ ನಲ್ಲಿ ಇದುವರೆಗೆ 7 ಬಾರಿ ಮುಖಾಮುಖಿಯಾಗಿದೆ. ಒಟ್ಟು 11 ಬಾರಿ ಏಷ್ಯಾ ಕಪ್ ಫೈನಲ್ ಗೇರಿರುವ ಟೀಂ ಇಂಡಿಯಾ 7 ಬಾರಿ ಪ್ರಶಸ್ತಿ ಗೆದ್ದುಕೊಂಡು ಅಗ್ರಸ್ಥಾನದಲ್ಲಿದೆ. ಶ್ರೀಲಂಕಾ ಗರಿಷ್ಠ ಬಾರಿ ಅಂದರೆ 13 ಬಾರಿ ಫೈನಲ್ ಪ್ರವೇಶಿಸಿದ್ದು 6 ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ಹಾಲಿ ಚಾಂಪಿಯನ್ ಪಟ್ಟವೂ ಲಂಕಾ ಬಳಿಯಿದೆ.

ವಿಶೇಷವೆಂದರೆ ಭಾರತ-ಲಂಕಾ ನಡುವೆ ಫೈನಲ್ ನಡೆದಾಗಲೆಲ್ಲಾ ಭಾರತವೇ ಮೇಲುಗೈ ಸಾಧಿಸಿತ್ತು. ಒಟ್ಟು ಐದು ಬಾರಿ ಲಂಕಾ ವಿರುದ್ಧ ಟೀಂ ಇಂಡಿಯಾ ಫೈನಲ್ ಗೆದ್ದಿದೆ. ಒಂದು ಬಾರಿ ಮಾತ್ರ ಲಂಕಾ ಗೆದ್ದುಕೊಂಡಿತ್ತು. ಈಗ ಮತ್ತೊಮ್ಮೆ ಟೀಂ ಇಂಡಿಯಾ ಇತಿಹಾಸ ಮರುಕಳಿಸುವ ವಿಶ್ವಾಸದಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ