ಟೀಂ ಇಂಡಿಯಾ ಬಾಂಗ್ಲಾ ವಿರುದ್ಧ ಆಡುತ್ತಿದ್ದರೆ ಫೈನಲ್ ಗೆ ಬ್ಯಾಟಿಂಗ್ ಪ್ರಾಕ್ಟೀಸ್ ಶುರು ಮಾಡಿದ ಕೊಹ್ಲಿ

ಶನಿವಾರ, 16 ಸೆಪ್ಟಂಬರ್ 2023 (09:20 IST)
Photo Courtesy: Twitter
ಕೊಲೊಂಬೊ: ಒಂದೆಡೆ ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧ ಸೂಪರ್ ಫೋರ್ ಪಂದ್ಯವಾಡುತ್ತಿದ್ದರೆ ಇತ್ತ ಆಡುವ ಬಳಗದಿಂದ ಹೊರಗಿದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದರು.

ನಿನ್ನೆಯ ದಿನದಾಟದಲ್ಲಿ ಕೊಹ್ಲಿ ಸೇರಿದಂತೆ ಫೈನಲ್ ಆಡಲಿರುವ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಕೊಹ್ಲಿ ಕೆಲವು ಹೊತ್ತು ನೀರು ಸರಬರಾಜು ಮಾಡಿದರು.

ಆದರೆ ಇಷ್ಟಕ್ಕೇ ಸುಮ್ಮನಾಗದ ಕಿಂಗ್ ಕೊಹ್ಲಿ ಭಾನುವಾರ ನಡೆಯಲಿರುವ ಫೈನಲ್ ಪಂದ್ಯಕ್ಕೆ ಸಿದ್ಧತೆ ಆರಂಭಿಸಿದ್ದಾರೆ. ಒಂದೆಡೆ ತಂಡ ಬಾಂಗ್ಲಾ ವಿರುದ್ಧ ಔಪಚಾರಿಕ ಪಂದ್ಯದಲ್ಲಿ ಆಡುತ್ತಿದ್ದರೆ ಕೊಹ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ