ಸ್ಪಿನ್ನರ್ ಗಳ ಗುಂಪು ಕಟ್ಟಿಕೊಂಡು ಭಾರತಕ್ಕೆ ಬಂದಿಳಿಯಲಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡ
ಸೋಮವಾರ, 16 ಜನವರಿ 2017 (14:18 IST)
ಸಿಡ್ನಿ: ಇಂಗ್ಲೆಂಡ್ ಗೆ ಟೆಸ್ಟ್ ಸರಣಿಯಲ್ಲಿ ಆದ ಗತಿ ನೋಡಿ ಆಸ್ಟ್ರೇಲಿಯಾ ಬುದ್ಧಿ ಕಲಿತುಕೊಂಡಿದೆ. ಹೀಗಾಗಿ ಭಾರತದಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ಆಸೀಸ್ ತಂಡ ಸ್ಪಿನ್ನರ್ ಗಳ ಗುಂಪು ಕಟ್ಟಿಕೊಂಡು ಬಂದಿಳಿಯಲಿದೆ.
ಕಳೆದ ಒಂಭತ್ತು ಸರಣಿಗಳನ್ನು ಆಸೀಸ್ ಭಾರತದಲ್ಲಿ ಸೋತಿದೆ. ಈ ಬಾರಿಯಾದರೂ ಗೆಲ್ಲುವ ಛಲದೊಂದಿಗೆ ಹೊಸ ಸ್ಪಿನ್ ಬೌಲರ್ ಗಳನ್ನು ತಂಡದಲ್ಲಿ ಸೇರಿಸಿಕೊಂಡಿದೆ. 16 ಸದಸ್ಯರ ತಂಡದಲ್ಲಿ ನಾಲ್ವರು ಸ್ಪೆಷಲಿಸ್ಟ್ ಸ್ಪಿನ್ನರ್ ಗಳನ್ನು ಆಯ್ಕೆ ಮಾಡಲಾಗಿದೆ.
ಅನುಭವಿ ಮಿಚೆಲ್ ಮಾರ್ಷ್ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ಜತೆಗೆ ಇನ್ನೂ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡದ ಮಿಚೆಲ್ ಸ್ವೆಪ್ಸನ್ ಮತ್ತು ಆಷ್ತೋನ್ ಅಗರ್ ಅವರನ್ನೂ ತಂಡದಲ್ಲಿ ಸೇರಿಸಿಕೊಂಡಿದೆ. ಕಳೆದ ಹತ್ತು ವರ್ಷಗಳಿಂದ ಯಾವ ತಂಡವೂ ಭಾರತದಲ್ಲಿ ಯಶಸ್ಸು ಕಂಡಿಲ್ಲ. ಸ್ಟೀವ್ ಸ್ಮಿತ್ ಬಳಗವಾದರೂ ಅದನ್ನು ಸಾಧಿಸಬೇಕೆಂಬ ಛಲದಲ್ಲಿ ಸಾಕಷ್ಟ ಸ್ಪಿನ್ ಆಯ್ಕೆಯೊಂದಿಗೆ ಬರುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ