ತೂಕ ಇಳಿಸಿಕೊಂಡ ಕ್ರಿಕೆಟಿಗ ಸರ್ಫರಾಜ್ ಖಾನ್: ಇವರೇನಾ ಅವರು
ದೇಹ ತೂಕದಿಂದಾಗಿಯೇ ಅವರಿಗೆ ತಂಡದಲ್ಲಿ ಅವಕಾಶ ಸಿಗುವುದು ಕಷ್ಟವಾಗಿತ್ತು. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡಿದ್ದೇ ಕೊನೆ. ಅದಾದ ಬಳಿಕ ಸರ್ಫರಾಜ್ ಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಆದರೆ ಹಾಗಂತ ಅವರು ಸುಮ್ಮನೇ ಕೂತಿಲ್ಲ.
ತಮ್ಮ ದೇಹ ತೂಕವನ್ನು ಇಳಿಸಿಕೊಳ್ಳಲು ಶ್ರಮಪಟ್ಟಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಅವರು 17 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಮೊದಲು ಗುಂಡ ಗುಂಡಗಿದ್ದ ಸರ್ಫರಾಜ ಈಗ ಕಂಪ್ಲೀಟ್ ಫಿಟ್ ಆಗಿ ಕಾಣುತ್ತಿದ್ದಾರೆ. ಅವರ ದಡೂತಿ ಹೊಟ್ಟೆ ಎಲ್ಲವೂ ಕರಗಿದೆ.
ಹಲವುರ ಸರ್ಫರಾಜ್ ಖಾನ್ ಫಿಟ್ನೆಸ್ ಬಗ್ಗೆ ಅವಹೇಳನ ಮಾಡಿದ್ದರು. ಅವರ ದೇಹ ಗಾತ್ರವನ್ನಿಟ್ಟುಕೊಂಡು ಬಾಡಿಶೇಮ್ ಮಾಡಿದ್ದರು. ಅವರೆಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಸರ್ಫರಾಜ್ ದೇಹ ತೂಕ ಇಳಿಸಿಕೊಂಡಿದ್ದಾರೆ. ಅವರ ಲೇಟೆಸ್ಟ್ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.