ರಾಷ್ಟ್ರದ ವೇಗದ ಬೌಲರುಗಳಿಗೆ ಉಂಟಾಗುವ ಗಾಯಗಳನ್ನು ತಗ್ಗಿಸಿ ಅವರ ಸಾಧನೆಯ ಸುಧಾರಣೆಗೆ ಜಲಾಂತರ್ಗಾಮಿ ಮತ್ತು ನಿರ್ದೇಶಿತ ಕ್ಷಿಪಣಿ ತಂತ್ರಜ್ಞಾನ ಬಳಸಿಕೊಂಡು ಕ್ರಮಾವಳಿಯನ್ನು ಸಂಶೋಧಕರು ರೂಪಿಸಿದ್ದಾರೆ. ಈ ತಂತ್ರಜ್ಞಾನವನ್ನು ಟಾರ್ಪೆಡೊ ತಂತ್ರಜ್ಞಾನವೆಂದು ಕರೆಯಲಾಗುತ್ತಿದ್ದು, ವೃತ್ತಿಪರ ಕ್ರಿಕೆಟಿಗರ ಕೆಲಸದ ಒತ್ತಡ ಅಳೆಯುವ ಪ್ರಸಕ್ತ ವಿಧಾನಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ಕ್ಯಾಥೋಲಿಕ್ ವಿವಿಯ ಕ್ರೀಡಾ ವಿಜ್ಞಾನಿಗಳು ಈ ಕ್ರಮಾವಳಿ ರೂಪಿಸಿದ್ದಾರೆ.