ಭಾರತ-ಆಸ್ಟ್ರೇಲಿಯಾ ಏಕದಿನ: ಭಾರತದ ಗೆಲುವಿಗೆ ಸಾಧಾರಣ ಮೊತ್ತ
ಶನಿವಾರ, 2 ಮಾರ್ಚ್ 2019 (17:05 IST)
ಹೈದರಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್, ಟೀಂ ಇಂಡಿಯಾ ಗೆಲುವಿಗೆ 237 ರನ್ ಗಳ ಗುರಿ ನೀಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿತು. ಆಸೀಸ್ ಪರ ಉಸ್ಮಾನ್ ಖವಾಜ 50, ಗ್ಲೆನ್ ಮ್ಯಾಕ್ಸ್ ವೆಲ್ 40, ಮಾರ್ಕಸ್ ಸ್ಟಾಯಿನಿಸ್ 37, ಅಲೆಕ್ಸ್ ಕ್ಯಾರೆ 36 ರನ್ ಗಳಿಸಿದರು.
ಭಾರತದ ಪರ ಬೌಲರ್ ಗಳಿಂದ ಸಂಘಟಿತ ಹೋರಾಟ ಬಂತು. ಮೊದಲನೆಯ ಇನಿಂಗ್ಸ್ ನ ದ್ವಿತೀಯ ಓವರ್ ನಲ್ಲೇ ಆಸೀಸ್ ರನ್ ಗಳಿಸುವ ಮೊದಲೇ ಜಸ್ಪ್ರೀತ್ ಬುಮ್ರಾ ನಾಯಕ ಏರಾನ್ ಫಿಂಚ್ ಮೂಲಕ ಮೊದಲ ಬಲಿ ಪಡೆದರು. ಬಳಿಕ ಬುಮ್ರಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್ ತಲಾ 2 ವಿಕೆಟ್ ಕಬಳಿಸಿದರು. ಕೇದಾರ್ ಜಾದವ್ ಗೆ 1 ವಿಕೆಟ್ ಸಿಕ್ಕಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.