ವಿರಾಟ್ ಕೊಹ್ಲಿಯ ಮಣಿಸಲು ನಿಷೇಧಿತ ವಾರ್ನರ್, ಸ್ಟೀವ್ ಸ್ಮಿತ್ ಮೊರೆ ಹೋದ ಆಸೀಸ್

ಮಂಗಳವಾರ, 27 ನವೆಂಬರ್ 2018 (09:35 IST)
ಸಿಡ್ನಿ:  ತೃತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಿಡಿದದ್ದು ನೋಡಿ ಆಸ್ಟ್ರೇಲಿಯನ್ನರ ತಲೆಬಿಸಿ ಹೆಚ್ಚಾಗಿದೆ. ಕೊಹ್ಲಿ ಇದೇ ರೀತಿ ಆರ್ಭಟಿಸಿದರೆ ಟೆಸ್ಟ್ ಸರಣಿಯಲ್ಲಿ ಸೋಲು ಗ್ಯಾರಂಟಿ ಎಂದು ಮನಗಂಡಿರುವ ಆಸೀಸ್ ತಂಡ ಇದೀಗ ನಿಷೇಧಿತ ಆಟಗಾರರಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮೊರೆ ಹೋಗಿದೆ.

ಬಾಲ್ ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧ ಶಿಕ್ಷೆಯಲ್ಲಿರುವ ಹಿರಿಯ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಇದೀಗ ತಮ್ಮ ತಂಡದ ಬೌಲರ್ ಗಳಿಗೆ ಕೊಹ್ಲಿಯನ್ನು ಎದುರಿಸಲು ಹೇಗೆ ಎಂಬ ವಿಚಾರದಲ್ಲಿ ಟಿಪ್ಸ್ ನೀಡಲಿದ್ದಾರೆ.

ಆಸ್ಟ್ರೇಲಿಯಾ ತಂಡದ ಜತೆಗೆ ನೆಟ್ಸ್ ನಲ್ಲಿ ಈ ಇಬ್ಬರೂ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬೌಲಿಂಗ್ ಕೋಚ್ ಮತ್ತು ಬೌಲರ್ ಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ. ಡಿಸೆಂಬರ್ 6 ರಿಂದ ಅಡಿಲೇಡ್ ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ