ಧೋನಿಯಂತೆ ಡಿಆರ್ ಎಸ್ ವಿಚಾರದಲ್ಲಿ ಕೊಹ್ಲಿಯನ್ನೇ ಸುಮ್ಮನಾಗಿಸಿದ ರಿಷಬ್ ಪಂತ್!

ಭಾನುವಾರ, 25 ನವೆಂಬರ್ 2018 (09:41 IST)
ಮೆಲ್ಬೋರ್ನ್: ಡಿಆರ್ ಎಸ್ ನಿಯಮವನ್ನು ಅಳವಡಿಸಬೇಕೋ ಬೇಡವೋ ಎಂಬ ವಿಚಾರದಲ್ಲಿ ಧೋನಿಯಷ್ಟು ಕರಾರುವಾಕ್ ಆಗಿ ನಿರ್ಣಯ ತೆಗೆದುಕೊಳ್ಳುವವರು ಯಾರೂ ಇಲ್ಲವೇನೋ. ಆದರೆ ಧೋನಿ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ವಿಕೆಟ್ ಕೀಪರ್ ರಿಷಬ್ ಪಂತ್ ಅದೇ ಕೆಲಸ ಮಾಡಿದ್ದಾರೆ.

ಸಾಮಾನ್ಯವಾಗಿ ಧೋನಿ ಡಿಆರ್ ಎಸ್ ತೆಗೆದುಕೊಳ್ಳಬೇಕೋ ಬೇಡವೋ ಎಂಬ ಬಗ್ಗೆ ನಾಯಕ, ಬೌಲರ್, ಬ್ಯಾಟ್ಸ್ ಮನ್ ಗೆ ಸರಿಯಾದ ಸೂಚನೆ ಕೊಡುತ್ತಾರೆ. ಅದೇ ಕೆಲಸವನ್ನು ರಿಷಬ್ ಪಂತ್ ಕೂಡಾ ಮೊನ್ನೆ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಮಾಡಿದ್ದಾರೆ.

ಆಸೀಸ್ ಬ್ಯಾಟ್ಸ್ ಮನ್ ಅಲೆಕ್ಸ್ ಕ್ಯಾರೇ ಸ್ವೀಪ್ ಮಾಡಿದ ಬಾಲ್ ರಿಷಬ್ ಕೈ ಬಂದು ಸೇರಿತ್ತು. ಫೀಲ್ಡರ್ ಗಳು ಔಟ್ ಗಾಗಿ ಮನವಿ ಸಲ್ಲಿಸಿದರೆ ಅಂಪಾಯರ್ ಔಟ್ ನೀಡಲಿಲ್ಲ. ಆದರೆ ವಿಕೆಟ್ ಕೀಪರ್ ರಿಷಬ್ ಪಂತ್ ಡಿಆರ್ ಎಸ್ ತೆಗೆದುಕೊಳ್ಳಬೇಡಿ ಎಂದು ನಾಯಕ ಕೊಹ್ಲಿ, ಉಪ ನಾಯಕ ರೋಹಿತ್ ಶರ್ಮಾ ಮತ್ತು ಬೌಲರ್ ಕುಲದೀಪ್ ಯಾದವ್ ಗೆ ಸಲಹೆ ನೀಡಿದರು. ರಿಷಬ್ ಸಲಹೆ ಸರಿಯಾಗಿಯೇ ಇತ್ತು. ರಿಪ್ಲೇನಲ್ಲಿ ನೋಡಿದಾಗ ಬಾಲ್ ಬ್ಯಾಟ್ ಗೆ ತಾಗದೇ ಮುಂಗೈಗೆ ತಾಕಿತ್ತಷ್ಟೇ. ಒಂದು ವೇಳೆ ರಿಷಬ್ ಮಾತು ಕೇಳದೇ ರಿವ್ಯೂ ಪಡೆದಿದ್ದರೆ ವೃಥಾ ಹಾಳಾಗುತ್ತಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ