ತಿಲಕವಿಟ್ಟುಕೊಳ್ಳಲು ನಿರಾಕರಿಸಿದ ಕ್ರಿಕೆಟಿಗ ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್

ಶನಿವಾರ, 4 ಫೆಬ್ರವರಿ 2023 (08:40 IST)
ಮುಂಬೈ: ಸಾಮಾನ್ಯವಾಗಿ ಟೀಂ ಇಂಡಿಯಾ ಕ್ರಿಕೆಟಿಗರು ಹೋಟೆಲ್ ರೂಂಗೆ ಬಂದಿಳಿಯುವಾಗ, ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ತಿಲಕವಿಟ್ಟು ಇಲ್ಲವೇ ಹಾರ ಹಾಕಿ ಆಯಾ ಸ್ಥಳದ ಸಂಪ್ರದಾಯಕ್ಕೆ ತಕ್ಕಂತೆ ಸ್ವಾಗತಿಸಲಾಗುತ್ತದೆ.

ಅದೇ ರೀತಿ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ವೇಳೆ ಹೋಟೆಲ್ ರೂಂಗೆ ಆಗಮಿಸುವಾಗ ಟೀಂ ಇಂಡಿಯಾ ಕ್ರಿಕೆಟಿಗರಿಗೆ ತಿಲಕವಿಟ್ಟು ಸ್ವಾಗತಿಸಲಾಗಿತ್ತು. ಆದರೆ ಮುಸ್ಲಿಂ ಧರ್ಮೀಯರಾದ ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ತಿಲಕವಿಡಲು ನಿರಾಕರಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ಈ ಕ್ರಿಕೆಟಿಗರ ಪರವಾಗಿ ಮಾತನಾಡಿದರೆ ಮತ್ತೆ ಕೆಲವರು ಇವರ ವರ್ತನೆಯನ್ನು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಅವರವರ ಧರ್ಮಕ್ಕೆ ತಕ್ಕಂತೆ ನಡೆದುಕೊಂಡಿದ್ದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ