ಕೈ ಮುರಿದರೂ ಬ್ಯಾಟಿಂಗ್ ಮಾಡಿ ಅಭಿಮಾನಿಗಳ ಮನಗೆದ್ದ ಹನುಮ ವಿಹಾರಿ

ಗುರುವಾರ, 2 ಫೆಬ್ರವರಿ 2023 (09:00 IST)
Photo Courtesy: Twitter
ಮುಂಬೈ: ಆಂಧ್ರಪ್ರದೇಶ ಪರ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯವಾಡುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗ ಹನುಮ ವಿಹಾರಿ ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಧ‍್ಯಪ್ರದೇಶ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಂಧ್ರ ನಾಯಕರೂ ಆಗಿರುವ ಹನುಮ ವಿಹಾರಿ ಕೈ ಮುರಿತಕ್ಕೊಳಗಾಗಿದ್ದರು. ಹೀಗಿದ್ದರೂ ತಂಡಕ್ಕಾಗಿ ಆಡಿದ ಹನುಮ ವಿಹಾರಿ ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡಿ 57 ಎಸೆತ ಎದುರಿಸಿ 27 ರನ್ ಗಳಿಸಿದ್ದಾರೆ.

2021 ರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಹನುಮ ವಿಹಾರಿ ಟೀಂ ಇಂಡಿಯಾ ಸಂಕಷ್ಟದಲ್ಲಿದ್ದಾಗ ಮಂಡಿರಜ್ಜು ಗಾಯವಾಗಿದ್ದರೂ ಬ್ಯಾಟಿಂಗ್ ನಡೆಸಿ ತಂಡವನ್ನು ಕಾಪಾಡಿದ್ದರು. ಇದೀಗ ಮತ್ತೆ ಅಂತಹದ್ದೇ ಸಾಹಸ ಪ್ರದರ್ಶಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ