ಆಸ್ಟ್ರೇಲಿಯಾ ಮಹಿಳೆಯರಿಗೆ ಆರನೇ ವಿಶ್ವಕಪ್ ಕಿರೀಟ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದವರಿಗೇ ಗೆಲುವು ಎನ್ನುವುದು ಮತ್ತೆ ಈ ಪಂದ್ಯದಲ್ಲೂ ಖಚಿತವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ವನಿತೆಯರು 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ಮೂನೀ ಅಜೇಯ 74 ರನ್ ಗಳಿಸಿದರು. ಈ ಮೊತ್ತ ಬೆನ್ನತ್ತಿದ ಆಫ್ರಿಕಾ 20 ಓವರ್ ಗಳಲ್ಲಿ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದರೊಂದಿಗೆ ಆಸ್ಟ್ರೇಲಿಯಾ 6 ನೇ ಬಾರಿಗೆ ವಿಶ್ವಕಪ್ ಕಿರೀಟ ಹೊತ್ತು ಮೆರೆದಾಡಿತು. ನಾಯಕಿ ಮೆಗ್ ಲ್ಯಾನಿಂಗ್ ಐದನೇ ವಿಶ್ವಕಪ್ ಹೊತ್ತು ರಿಕಿ ಪಾಂಟಿಂಗ್ ದಾಖಲೆಯನ್ನು ಮುರಿದರು. ಸತತ ಏಳನೇ ಬಾರಿಗೆ ಆಸ್ಟ್ರೇಲಿಯಾ ಮಹಿಳೆಯರು ವಿಶ್ವಕಪ್ ಫೈನಲ್ ತಲುಪಿದ್ದರು.