ರಾಜ್ ಕೋಟ್ ಏಕದಿನದಿಂದ ಅಕ್ಸರ್ ಪಟೇಲ್ ಔಟ್: ವಿಶ್ವಕಪ್ ನಲ್ಲಿ ಆಡ್ತಾರಾ?

ಮಂಗಳವಾರ, 26 ಸೆಪ್ಟಂಬರ್ 2023 (08:50 IST)
ಮುಂಬೈ: ಏಷ್ಯಾ ಕಪ್ ಟೂರ್ನಿ ವೇಳೆ ಗಾಯಗೊಂಡಿದ್ದ ಟೀಂ ಇಂಡಿಯಾ ಆಲ್ ರೌಂಡರ್ ಇದೀಗ ನಾಳೆ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ಆಡುತ್ತಿಲ್ಲ.

ಅಕ್ಸರ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸದ್ಯಕ್ಕೆ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅಕ್ಸರ್ ವಿಶ್ವಕಪ್ ತಂಡಕ್ಕೆ ಮರಳುತ್ತಾರಾ ಎನ್ನುವುದೇ ಎಲ್ಲರ ಪ್ರಶ್ನೆಯಾಗಿದೆ.

ಬಿಸಿಸಿಐ ಮೂಲಗಳ ಪ್ರಕಾರ ಅಕ್ಸರ್ ಚೇತರಿಕೆಯ ಹಂತದಲ್ಲಿದ್ದು, ಅಭ್ಯಾಸ ಪಂದ್ಯಗಳ ಬಳಿಕ ನಡೆಯಲಿರುವ ಮುಖ್ಯ ಪಂದ್ಯಗಳ ವೇಳೆಗೆ ಅಕ್ಸರ್ ಫಿಟ್ ಆಗಿ ತಂಡಕ್ಕೆ ಮರಳಬಹುದು. ಒಂದು ವೇಳೆ ಮರಳದೇ ಇದ್ದರೆ ಅಶ್ವಿನ್ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ