ಮೂರನೇ ಏಕದಿನಕ್ಕೆ ಶುಬ್ಮನ್ ಗಿಲ್, ಶಾರ್ದೂಲ್ ಠಾಕೂರ್ ಗೆ ರೆಸ್ಟ್

ಸೋಮವಾರ, 25 ಸೆಪ್ಟಂಬರ್ 2023 (15:04 IST)
ರಾಜ್ ಕೋಟ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬುಧವಾರ ನಡೆಯಲಿರುವ ಮೂರನೇ ಏಕದಿನ ಪಂದ್ಯದಿಂದ ಆರಂಭಿಕ ಶುಬ್ಮನ್ ಗಿಲ್, ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಗೆ ವಿಶ್ರಾಂತಿ ನೀಡಲಾಗಿದೆ.

ಈ ಪಂದ್ಯಕ್ಕೆ ಖಾಯಂ ನಾಯಕ ರೋಹಿತ್ ಶರ್ಮಾ, ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಂಡಕ್ಕೆ ವಾಪಸಾಗುತ್ತಿದ್ದಾರೆ. ಕಳೆದ ಎರಡು ಪಂದ್ಯಗಳಿಂದ ಈ ಇಬ್ಬರೂ ಆಟಗಾರರು ಬ್ರೇಕ್ ಪಡೆದಿದ್ದರು.

ಆದರೆ ಈಗ ಹಿರಿಯರು ಬರುತ್ತಿದ್ದಂತೇ ಮುಂಬರುವ ವಿಶ್ವಕಪ್ ದೃಷ್ಟಿಯಿಂದ ಗಿಲ್, ಶಾರ್ದೂಲ್ ಗೆ ವಿಶ್ರಾಂತಿ ನೀಡಲಾಗಿದೆ. ಈಗಾಗಲೇ ತಂಡದಲ್ಲಿದ್ದ ಪ್ರಸಿದ್ಧ ಕೃಷ್ಣ, ಋತುರಾಜ್ ಗಾಯಕ್ ವಾಡ್ ತಂಡದಿಂದ ಹೊರಬಿದ್ದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ