ಮೈದಾನದಲ್ಲಿ ಕಿತ್ತಾಟ: ಬಾಂಗ್ಲಾ-ಲಂಕಾ ಕ್ರಿಕೆಟಿಗರಿಗೆ ದಂಡ

ಮಂಗಳವಾರ, 26 ಅಕ್ಟೋಬರ್ 2021 (11:19 IST)
ದುಬೈ: ಟಿ20 ವಿಶ್ವಕಪ್ ಕೂಟದಲ್ಲಿ ಪಂದ್ಯದ ನಡುವೆ ಮೈದಾನದಲ್ಲೇ ಕಿತ್ತಾಡಿಕೊಂಡ ಬಾಂಗ್ಲಾ ಕ್ರಿಕೆಟಿಗರ ಲಿಟನ್ ದಾಸ್ ಮತ್ತು ಶ್ರೀಲಂಕಾ ಆಟಗಾರ ಲಹಿರು ಕುಮಾರ ಅವರಿಗೆ ಐಸಿಸಿ ದಂಡ ವಿಧಿಸಿದೆ.

ಶಾರ್ಜಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಇಬ್ಬರು ಆಟಗಾರರ ಕಲಹ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಕೊನೆಗೆ ಅಂಪಾಯರ್ ಮತ್ತು ಉಳಿದ ಆಟಗಾರರು ಇಬ್ಬರನ್ನೂ ಬೇರ್ಪಡಿಸಿದ್ದರು.

ಲಹಿರು ಕುಮಾರ ಬಾಲ್ ನಲ್ಲಿ ಔಟಾದ ಬಳಿಕ ಲಿಟನ್ ದಾಸ್ ಪೆವಿಲಿಯನ್ ಗೆ ಮರಳುವ ವೇಳೆ ಇಬ್ಬರ ನಡುವೆ ಘರ್ಷಣೆಯಾಗಿತ್ತು. ದಂಡದ ಜೊತೆಗೆ 1 ಡಿಮೆರಿಟ್ ಅಂಕವನ್ನೂ  ವಿಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ