ವಿಕೆಟ್ ಕೀಪರ್‌ನನ್ನು ಸ್ಟಂಪ್‌ನಿಂದ ಹೊಡೆದು ಸಾಯಿಸಿದ ಬ್ಯಾಟ್ಸ್‌ಮನ್

ಗುರುವಾರ, 12 ಮೇ 2016 (23:02 IST)
ಬಾಂಗ್ಲಾದೇಶದ ಸ್ಥಳೀಯ ಕ್ರಿಕೆಟ್ ಪಂದ್ಯವೊಂದರಲ್ಲಿ  ವಿಕೆಟ್ ಕೀಪರ್ ಆಗಿದ್ದ ಬಾಲಕನನ್ನು ಬ್ಯಾಟ್ಸ್ ಮನ್ ವಿಕೆಟ್‌ನಿಂದ ಹೊಡೆದು ಸಾಯಿಸಿದ ಅಮಾನವೀಯ ಘಟನೆ ವರದಿಯಾಗಿದೆ. ಬ್ಯಾಟ್ಸ್‌ಮನ್ ಆಡಿದ ಎಸೆತವೊಂದರಲ್ಲಿ ಕ್ಯಾಚಿತ್ತು ಔಟಾಗಿದ್ದರು.

ಆದರೆ ನೋಬಾಲ್ ಕಾರಣದಿಂದ ಅಂಪೈರ್ ಔಟ್ ಕೊಟ್ಟಿರಲಿಲ್ಲ. ಎರಡನೇ ಬಾರಿ ಕೂಡ ಬ್ಯಾಟ್ಸ್ ಮನ್ ಔಟಾದಾಗ ಅಂಪೈರ್ ನೋಬಾಲ್ ಡಿಕ್ಲೇರ್ ಮಾಡಿದ್ದರು. ಇದರಿಂದ ಕೋಪಗೊಂಡ ವಿಕೆಟ್ ಕೀಪರ್ 16ರ ಹರೆಯದ ಶಿಕ್ದರ್ ಅಂಪೈರ್ ತೀರ್ಮಾನವನ್ನು ಪ್ರಶ್ನಿಸಿ ಅಂಪೈರ್ ಬಳಿಗೆ ಧಾವಿಸಿದ.

ಆಗ ಬ್ಯಾಟ್ಸ್ ಮನ್ ಕೋಪಗೊಂಡು ಸ್ಟಂಪ್ಸ್‌ ಕಿತ್ತು ಶಿಕ್ದರ್ ತಲೆಗೆ ಬಾರಿಸಿದ್ದರಿಂದ ತೀವ್ರ ಪೆಟ್ಟಿನಿಂದ ಶಿಕ್ದರ್ ಕುಸಿದುಬಿದ್ದು ಸತ್ತಿದ್ದಾನೆ. 

ವೆಬ್ದುನಿಯಾವನ್ನು ಓದಿ