IND vs ENG: ಎಷ್ಟೇ ಕೆಣಕಿದ್ರೂ ನಾನು ಕೇರ್ ಮಾಡಲ್ಲ: ಕೆಎಲ್ ರಾಹುಲ್ ವಿಡಿಯೋ ವೈರಲ್

Krishnaveni K

ಸೋಮವಾರ, 14 ಜುಲೈ 2025 (10:06 IST)
Photo Credit: X
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ತಲುಪಿದ್ದು, ಟೀಂ ಇಂಡಿಯಾ ಬ್ಯಾಟಿಗ ಕೆಎಲ್ ರಾಹುಲ್ ತಮ್ಮನ್ನು ಸ್ಲೆಡ್ಜ್ ಮಾಡಲು ಬಂದ ಇಂಗ್ಲೆಂಡ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಗೆ ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

ನಿನ್ನೆಯ ದಿನದಂತ್ಯಕ್ಕೆ ಟೀಂ ಇಂಡಿಯಾ 193 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ್ದು 4 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿ ದಿನದಾಟ ಮುಗಿಸಿತ್ತು. ಮತ್ತೊಂದು ತಾಳ್ಮೆಯ ಇನಿಂಗ್ಸ್ ಆಡಿದ ಕೆಎಲ್ ರಾಹುಲ್ 33 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. 

ಇಂಗ್ಲೆಂಡ್ ಗೆ ಈ ಸರಣಿಯುದ್ಧಕ್ಕೂ ತಲೆನೋವಾಗಿರುವುದು ಕೆಎಲ್ ರಾಹುಲ್. ಇದೀಗ ಭಾರತವನ್ನು ಸೋಲಿಸಬೇಕಾದರೆ ರಾಹುಲ್ ವಿಕೆಟ್ ಕಬಳಿಸುವುದು ಎಷ್ಟು ಮುಖ್ಯ ಎಂದು ಇಂಗ್ಲೆಂಡ್ ನಾಯಕನಿಗೆ ಚೆನ್ನಾಗಿಯೇ ಅರಿವಿದೆ. ಅದಕ್ಕಾಗಿಯೇ ನಿನ್ನೆಯ ದಿನದಂತ್ಯದ ವೇಳೆಗೆ ಬೆನ್ ಸ್ಟೋಕ್ಸ್ ಕೆಎಲ್ ರಾಹುಲ್ ರನ್ನು ಸ್ಲೆಡ್ಜ್ ಮಾಡಲು ಪ್ರಯತ್ನಿಸಿದ್ದಾರೆ.

ಚಪ್ಪಾಳೆ ತಟ್ಟುತ್ತಾ ಕೆಎಲ್ ರಾಹುಲ್  ಬಳಿ ಬೆನ್ ಸ್ಟೋಕ್ಸ್ ಬಂದು ಏನೋ ಕೆರಳಿಸುವ ಮಾತನಾಡಿದ್ದಾರೆ. ಆದರೆ ಇದಕ್ಕೆ ರಾಹುಲ್ ನಗುತ್ತಲೇ ಪ್ರತ್ಯುತ್ತರ ನೀಡಿ ಬ್ಯಾಟಿಂಗ್ ಗೆ ಮರಳಿದ್ದಾರೆ. ನೀವು ಏನೇ ಕೆಣಕಿದ್ರೂ ನಾನು ಕ್ಯಾರೇ ಅನ್ನಲ್ಲ ಎಂದು ರಾಹುಲ್ ಹೇಳಿದಂತಿತ್ತು. ಈ ವಿಡಿಯೋ ಇಲ್ಲಿದೆ ನೋಡಿ.


Only man standing between England and win Ben stokes trying hard to distract KL Rahul pic.twitter.com/P2aNe9KcNg

— SKY???? (@skyxaura) July 13, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ