ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಕಶ್ಯಪ್ ದಾಂಪತ್ಯದಲ್ಲಿ ಬಿರುಕು

Krishnaveni K

ಸೋಮವಾರ, 14 ಜುಲೈ 2025 (11:28 IST)
ಹೈದರಾಬಾದ್: ಭಾರತ ಕಂಡ ಶ್ರೇಷ್ಠ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಪತಿ ಪಾರುಪಳ್ಳಿ ಕಶ್ಯಪ್ ದಾಂಪತ್ಯ ಮುರಿದುಬಿದ್ದಿದೆ. ಸ್ವತಃ ಸೈನಾ ನೆಹ್ವಾಲ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ವಿಚ್ಛೇದನವಾಗಿರುವುದಾಗಿ ಪ್ರಕಟಿಸಿದ್ದಾರೆ.

ಬ್ಯಾಡ್ಮಿಂಟನ್ ತಾರೆಯರಾಗಿದ್ದ ಸೈನಾ ಮತ್ತು ಕಶ್ಯಪ್ ಸ್ನೇಹಿತರಾಗಿದ್ದವರು. ಬಳಿಕ ಅವರ ಸಂಬಂಧ ಪ್ರೇಮಕ್ಕೆ ತಿರುಗಿ 2018 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಈಗ ದಂಪತಿ ದೂರವಾಗಲು ತೀರ್ಮಾನಿಸಿದ್ದಾರೆ.

ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿರುವ ಸೈನಾ ನೆಹ್ವಾಲ್ ‘ಜೀವನ ನಮ್ಮನ್ನು ಕವಲು ದಾರಿಯಲ್ಲಿ ಕೊಂಡೊಯ್ಯುತ್ತಿದೆ. ಸಾಕಷ್ಟು ಯೋಚಿಸಿದ ಬಳಿಕ ನಾನು ಮತ್ತು ಪಾರುಪಳ್ಳಿ ಕಶ್ಯಪ್ ಪರಸ್ಪರ ದೂರವಾಗಲು ತೀರ್ಮಾನಿಸಿದ್ದೇವೆ. ನಾವಿಬ್ಬರೂ ಪರಸ್ಪರ ಗೌರವ ಹೊಂದಿದ್ದು, ಸಾಕಷ್ಟು ನೆನಪುಗಳನ್ನು ಹೊಂದಿದ್ದೇವೆ. ಆದರೆ ಇದೀಗ ದೂರವಾಗುವುದೇ ಉತ್ತಮ ಎನಿಸುತ್ತಿದೆ. ನಮ್ಮ ವೈಯಕ್ತಿಕ ಜೀವನವನ್ನು ಗೌರವಿಸಿ ಎಂದು ಸೈನಾ ಬರೆದುಕೊಂಡಿದ್ದಾರೆ.

ಇದರೊಂದಿಗೆ ಮತ್ತೊಂದು ಸೆಲೆಬ್ರಿಟಿ ಜೋಡಿಯ ದಾಂಪತ್ಯವೂ ಮುರಿದುಬಿದ್ದಂತಾಗಿದೆ. ಅಷ್ಟೊಂದು ಜೊತೆ ಜೊತೆಯಾಗಿದ್ದವರು ಈಗ ದೂರವಾಗುತ್ತಿರುವುದು ಅವರ ಅಭಿಮಾನಿಗಳಿಗೆ ನಿಜಕ್ಕೂ ಶಾಕ್ ಉಂಟು ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ