ಟೀಂ ಇಂಡಿಯಾ ಕ್ರಿಕೆಟಿಗರ ಜೇಬು ಇನ್ನೂ ಭಾರ!

ಗುರುವಾರ, 8 ಮಾರ್ಚ್ 2018 (09:14 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು, ಪುರುಷ ಕ್ರಿಕೆಟಿಗರ ವೇತನ ಹೆಚ್ಚಳವಾಗಿದೆ. ಆದರೆ ಮಹಿಳಾ ಕ್ರಿಕೆಟಿಗರ ಸ್ಥಿತಿ ಎಂದಿನಂತೇ ಕೆಳ ಮಟ್ಟದಲ್ಲಿದೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಆಟಗಾರರನ್ನು ಗ್ರೇಡ್ ಎ ಪ್ಲಸ್ ವಿಭಾಗಕ್ಕೆ ಸೇರಿಸಲಾಗಿದ್ದು ಇವರು ವಾರ್ಷಿಕ 7 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಎ ಗ್ರೇಡ್ ಹೊಂದಿದ ಆಟಗಾರರಿಗೆ 5 ಕೋಟಿ ರೂ., ಗ್ರೇಡ್ ಬಿ ಆಟಗಾರರಿಗೆ 3 ಕೋಟಿ ರೂ ಮತ್ತು ಗ್ರೇಡ್ ಸಿ ಆಟಗಾರರಿಗೆ ವಾರ್ಷಿಕ 1 ಕೋಟಿ ರೂ. ವೇತನ ಸಿಗಲಿದೆ.

ಮಹಿಳಾ ಕ್ರಿಕೆಟಿಗರಿಗೆ ಗ್ರೇಡ್ ಎ ಆಟಗಾರ್ತಿಯರಿಗೆ 50 ಲಕ್ಷ ರೂ., ಗ್ರೇಡ್ ಬಿ ಆಟಗಾರರಿಗೆ ವಾರ್ಷಿಕ 25 ಲಕ್ಷ ರೂ. ಮತ್ತು ಗ್ರೇಡ್ ಸಿ ಆಟಗಾರರಿಗೆ ವಾರ್ಷಿಕ 10 ಲಕ್ಷ ರೂ. ಸಂಭಾವನೆ ಸಿಗಲಿದೆ. ಪುರುಷ  ಕ್ರಿಕೆಟಿಗರಿಗೆ ಹೋಲಿಸಿದರೆ ಇದು ತೀರಾ ಕಡಿಮೆ. ಮಿಥಾಲಿ ರಾಜ್, ಜೂಲಾನ್ ಗೋಸ್ವಾಮಿ, ಹರ್ಮನ್ ಪ್ರೀತ್ ಕೌರ್ ಮತ್ತು ಸ್ಮೃತಿ ಮಂದನ ಗ್ರೇಡ್ ಎ ಪಡೆದಿದ್ದಾರೆ. ಕನ್ನಡಿಗರಾದ ರಾಜೇಶ್ವರಿ ಗಾಯಕ್ ವಾಡ್, ವೇದಾ ಕೃಷ್ಣ ಮೂರ್ತಿ ಮೊದಲಾದವರು ಗ್ರೇಡ್ ಬಿ ಗುತ್ತಿಗೆ ಪಡೆದಿದ್ದಾರೆ.

 
ಪುರುಷ ಕ್ರಿಕೆಟಿಗರ ಎ ಪ್ಲಸ್ ವಿಭಾಗ: ವಿರಾಟ್ ಕೊಹ್ಲಿ, ಶಿಖರ್ ಧವನ್,  ರೋಹಿತ್ ಶರ್ಮಾ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ.

ಗ್ರೇಡ್ ಎ: ಧೋನಿ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಮುರಳಿ ವಿಜಯ್, ಚೇತೇಶ್ವರ ಪೂಜಾರ, ಅಜಿಂಕ್ಯಾ ರೆಹಾನೆ, ವೃದ್ಧಿಮಾನ್ ಸಹಾ.

ಗ್ರೇಡ್ ಬಿ: ಕೆಎಲ್ ರಾಹುಲ್,  ಉಮೇಶ್ ಯಾದವ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಹಾರ್ದಿಕ್ ಪಾಂಡ್ಯ,  ಇಶಾಂತ್ ಶರ್ಮಾ, ದಿನೇಶ್ ಕಾರ್ತಿಕ್.

ಗ್ರೇಡ್ ಸಿ: ಕೇದಾರ್ ಜಾದವ್, ಮನೀಶ್ ಪಾಂಡೆ, ಅಕ್ಸರ್ ಪಟೇಲ್, ಕರುಣ್ ನಾಯರ್, ಸುರೇಶ್ ರೈನಾ, ಪಾರ್ಥಿವ್ ಪಟೇಲ್, ಜಯಂತ್ ಯಾದವ್.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ