ಧೋನಿಗೆ ನಂ.7 ಕ್ರಮಾಂಕದ ಬ್ಯಾಟಿಂಗ್ ನೀಡಿದ್ದಕ್ಕೆ ಕೊಹ್ಲಿ, ರವಿಶಾಸ್ತ್ರಿಗೆ ಬಿಸಿಸಿಐ ಕ್ಲಾಸ್

ಶನಿವಾರ, 13 ಜುಲೈ 2019 (09:21 IST)
ಲಂಡನ್: ವಿಶ್ವಕಪ್ ಸೆಮಿಫೈನಲ್ ನಲ್ಲಿ ತಂಡ ಸಂಕಷ್ಟದಲ್ಲಿರುವಾಗ ಧೋನಿಯಂತಹ ಹಿರಿಯ ಅನುಭವಿ ಆಟಗಾರನನ್ನು ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಸಿದ್ದು ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.


ಈ ವಿಚಾರವಾಗಿ ಇದೀಗ ಬಿಸಿಸಿಐ ಆಡಳಿತ ಮಂಡಳಿ ಕೂಡಾ ಕೋಚ್ ರವಿಶಾಸ್ತ್ರಿ ಮತ್ತು ನಾಯಕ ವಿರಾಟ್ ಕೊಹ್ಲಿಯಿಂದ ವಿವರಣೆ ಬಯಸಿದೆ. ಧೋನಿಯನ್ನು ಅಷ್ಟು ಕೆಳ ಕ್ರಮಾಂಕದಲ್ಲಿ ಆಡಿಸಿದ್ದರ ಕಾರಣ ವಿವರಿಸಲು ಇಬ್ಬರಿಗೂ ಬಿಸಿಸಿಐ ಸೂಚಿಸಿದೆ.

ಇನ್ನೊಂದೆಡೆ ಈ ವಿಶ್ವಕಪ್ ಗೆ ತಂಡದ ಆಯ್ಕೆಯೇ ಸರಿಯಾಗಿರಲಿಲ್ಲ ಎಂದು ಬಿಸಿಸಿಐ ಮಾಜಿ ಕಾರ್ಯದರ್ಶಿ ಸಂಜಯ್ ಜಗದಾಳೆ ಆರೋಪಿಸಿದ್ದಾರೆ. ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ ಮನ್ ಗಾಗಿ ಹಲವು ಸಮಯದಿಂದ ಆಯ್ಕೆ ಸಮಿತಿ ಪ್ರಯೋಗ ಮಾಡುತ್ತಲೇ ಬಂತು. ಅಂತಿಮವಾಗಿ ದಿನೇಶ್ ಕಾರ್ತಿಕ್ ಅವಕಾಶ ಪಡೆದರೂ ಅದನ್ನು ಬಳಸಿಕೊಳ್ಳಲಿಲ್ಲ.

ಕೇವಲ ಐಪಿಎಲ್ ಪ್ರದರ್ಶನದ ಆಧಾರದಲ್ಲಿ ತಂಡವನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್ ಅಂತಹವರು ಉತ್ತಮ ಪ್ರದರ್ಶನ ನೀಡಿದರೂ ಅವರಿಗೆ ಹೆಚ್ಚು ಅವಕಾಶ ಸಿಗಲಿಲ್ಲ ಎಂದು ಜಗದಾಳೆ ಆಯ್ಕೆ ಸಮಿತಿ ಮೇಲೆ ಗೂಬೆ ಕೂರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ