ವಿಶ್ವಕಪ್ ನಿಂದ ಪಾಕಿಸ್ತಾನವನ್ನು ಬಹಿಷ್ಕರಿಸಲು ಭಾರತ ಹೇಳೋ ಹಾಗಿಲ್ಲ!

ಶುಕ್ರವಾರ, 22 ಫೆಬ್ರವರಿ 2019 (09:05 IST)
ದುಬೈ: ಪುಲ್ವಾಮಾ ದಾಳಿ ಹಿನ್ನಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಕ್ರಿಕೆಟ್ ಪಂದ್ಯದ ಮೇಲೆ ಅನಿಶ್ಚಿತತೆ ಮುಂದುವರಿದಿದೆ.


ಪಾಕಿಸ್ತಾನದ ವಿರುದ್ಧ ಭಾರತ ವಿಶ್ವಕಪ್ ನಲ್ಲೂ ಪಂದ್ಯವಾಡಬಾರದು ಎಂದು ಹಲವು ಮಾಜಿ ಕ್ರಿಕೆಟಿಗರು, ಅಭಿಮಾನಿಗಳು, ಒತ್ತಡ ಹೇರುತ್ತಿದ್ದಾರೆ. ಒಂದು ವೇಳೆ ನಿರ್ಣಾಯಕ ಘಟ್ಟದಲ್ಲಿ ಪಾಕ್ ಎದುರಾಳಿಯಾದರೆ ಏನು ಮಾಡುವುದು ಎಂಬ ಉಭಯ ಸಂಕಟ ಭಾರತದ್ದಾಗಿದೆ.

ಈ ಬೆಳವಣಿಗೆ ಹಿನ್ನಲೆಯಲ್ಲಿ ಪಾಕಿಸ್ತಾನವನ್ನೇ ಕೂಟದಿಂದ ಬಹಿಷ್ಕರಿಸುವಂತೆ ಬಿಸಿಸಿಐ, ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿಯನ್ನು ಒತ್ತಾಯಿಸಲಿದೆ ಎಂಬ ವರದಿ ಬಂದಿತ್ತು. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧಿಕಾರಿಯೊಬ್ಬರು, ಭಾರತ ಹೀಗೆ ಐಸಿಸಿ ಮೇಲೆ ಒತ್ತಡ ತರಲಾಗದು ಎಂದಿದ್ದಾರೆ. ಕೂಟದಲ್ಲಿ ಒಂದು ತಂಡ ಇರಬೇಕೇ ಬೇಡವೇ ಎಂಬ ಅಂತಿಮ ತೀರ್ಮಾನ ಐಸಿಸಿಯದ್ದು.

ಐಸಿಸಿಯ ಎಲ್ಲಾ ರಾಷ್ಟ್ರಗಳಿಗೂ ವಿಶ್ವಕಪ್ ಕೂಟದಲ್ಲಿ ಆಡುವ ಅರ್ಹತೆ ಇರುತ್ತದೆ. ಒಂದು ದೇಶ ಹೇಳಿದ ಮಾತ್ರಕ್ಕೆ ಮತ್ತೊಂದು ಸದಸ್ಯ ರಾಷ್ಟ್ರವನ್ನು ನಿಷೇಧಿಸಲು ಸಾಧ‍್ಯವಾಗದು. ಹೀಗಾಗಿ ಬಿಸಿಸಿಐ ಹೇಳಿದರೂ ಐಸಿಸಿ ಇದಕ್ಕೆ ಒಪ್ಪದು. ಈ ವಿಚಾರದಲ್ಲಿ ಬಿಸಿಸಿಐ ಏನೂ ಮಾಡಲಾಗದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ