ಯುಎಇನಲ್ಲಿ ಟಿ20 ವಿಶ್ವಕಪ್: ಬಿಸಿಸಿಐಗೆ ಐಸಿಸಿ ಗ್ರೀನ್ ಸಿಗ್ನಲ್
ಇದರೊಂದಿಗೆ ಯುಎಇನಲ್ಲಿ ಪ್ರತಿಷ್ಠಿತ ಕೂಟ ನಡೆಯುವುದು ಪಕ್ಕಾ ಆಗಿದೆ. ಅಕ್ಟೋಬರ್ 17 ರಿಂದ ನವಂಬರ್ 14 ರವರೆಗೂ ಟೂರ್ನಮೆಂಟ್ ನಡೆಯಲಿದೆ. ದುಬೈ, ಅಬುದಾಬಿ ಮತ್ತು ಶಾರ್ಜಾ ಮತ್ತು ಒಮನ್ ಕ್ರಿಕೆಟ್ ಅಕಾಡೆಮಿ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ.
ಈಗಾಗಲೇ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಟೀಂ ಇಂಡಿಯಾ ಬಿ ಗುಂಪಿನಲ್ಲಿದೆ. ಅರ್ಹತಾ ಸುತ್ತು ಆಡಲಿರುವ ಎಂಟು ಹೊಸ ತಂಡಗಳು ಅರ್ಹತಾ ಪಂದ್ಯಗಳಲ್ಲಿ ಆಡಿ ಬಳಿಕ ಸೂಪರ್ 12 ತಂಡಗಳ ಪಟ್ಟಿಗೆ ಸೇರ್ಪಡೆಯಾಗಲಿದೆ.