ನಿವೃತ್ತಿ ವದಂತಿಗಳಿಗೆ ಒಂದೇ ಕೆಲಸದಿಂದ ಉತ್ತರ ಕೊಟ್ಟ ರೋಹಿತ್ ಶರ್ಮಾ
2027 ರ ವಿಶ್ವಕಪ್ ಗೂ ಮೊದಲೇ ರೋಹಿತ್ ಶರ್ಮಾ ನಿವೃತ್ತಿಯಾಗಲಿದ್ದಾರೆ ಎಂಬ ಸುದ್ದಿಗಳಿವೆ. ಈಗಾಗಲೇ ರೋಹಿತ್ ಟಿ20 ಮತ್ತು ಟೆಸ್ಟ್ ಮಾದರಿಯಿಂದ ನಿವೃತ್ತಿ ಹೊಂದಿದ್ದಾರೆ. ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಅವರು ಮತ್ತೆ ಅಂತಾರಾಷ್ಟ್ರೀಯ ಪಂದ್ಯವನ್ನಾಡಲಿದ್ದಾರೆ.
ಇದಕ್ಕೆ ಮೊದಲು ಅವರು ನಿವೃತ್ತಿಯಾಗಬಹುದೇ ಎಂಬ ಅನುಮಾನಗಳಿತ್ತು. ಆದರೆ ರೋಹಿತ್ ವಿದೇಶ ಪ್ರವಾಸ ಮುಗಿಸಿ ಮುಂಬೈಗೆ ಮರಳಿದ್ದು ಟೀಂ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್ ಅಭಿಷೇಕ್ ನಾಯರ್ ಜೊತೆ ಅಭ್ಯಾಸ ಆರಂಭಿಸಿದ್ದಾರೆ.
ಐಪಿಎಲ್ ಮುಗಿದ ಬಳಿಕ ರೋಹಿತ್ ಕ್ರಿಕೆಟ್ ನಿಂದ ಬ್ರೇಕ್ ಪಡೆದಿದ್ದರು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳುವ ಮುನ್ನ ಅಭ್ಯಾಸ ನಡೆಸಬೇಕಿದೆ. ಇತ್ತೀಚೆಗೆ ವಿರಾಟ್ ಕೊಹ್ಲಿ ಕೂಡಾ ಇದೇ ರೀತಿ ಅಭ್ಯಾಸ ಆರಂಭಿಸಿದ್ದರು.