ಐಸಿಸಿ ಸಭೆಯಲ್ಲಿ ಬಿಸಿಸಿಐಗೆ ಸೋಲು: ಆತಂಕದಲ್ಲಿ ಟೀಂ ಇಂಡಿಯಾ

ಗುರುವಾರ, 27 ಏಪ್ರಿಲ್ 2017 (07:34 IST)
ದುಬೈ: ಐಸಿಸಿ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಆರ್ಥಿಕ ನೀತಿ ವಿರುದ್ಧ ಮತ ಬೀಳದೇ ಇರುವುದರಿಂದ ಬಿಸಿಸಿಐಗೆ ತೀವ್ರ ಹಿನ್ನಡೆಯಾಗಿದ್ದು, ಚಾಂಪಿಯನ್ಸ್ ಟ್ರೋಫಿ ಮೇಲೆ ಕಾರ್ಮೋಡ ಕವಿದಿದೆ.

 
ಹೊಸ ಆರ್ಥಿಕ ನೀತಿಗೆ ಬಿಸಿಸಿಐ  ವಿರೋಧವಿದ್ದು, ಅದರ ವಿರುದ್ಧ ಮತ ಹಾಕಿತ್ತು. ಆದರೆ ವಿಶ್ವದ ಇತರ ಕ್ರಿಕೆಟ್ ಮಂಡಳಿಗಳು ಬದಲಾವಣೆ ಪರ ಮತ ಹಾಕಿದೆ. ಇದರೊಂದಿಗೆ ಬಿಸಿಸಿಐ ನಿಲುವಿಗೆ ತೀವ್ರ ಹಿನ್ನಡೆಯಾಗಿದೆ.

ಸಾಕಷ್ಟು ಮತ ಹೊಸ ನೀತಿ ಪರ ಬಿದ್ದಿರುವುದರಿಂದ ಆದಾಯ ಹಂಚಿಕೆ ಸೇರಿದಂತೆ ಹಲವು ಆಡಳಿತಾತ್ಮಕ ವಿಷಯದಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ. ಇದನ್ನು ಬಿಸಿಸಿಐ ವಿರೋಧಿಸುತ್ತಿದೆ. ಗರಿಷ್ಠ ಲಾಭ ತಂದುಕೊಡುತ್ತಿರುವ ತನ್ನಂತಹ ಕ್ರಿಕೆಟ್ ಮಂಡಳಿಗೆ ಹೆಚ್ಚಿನ ಪಾಲು ಕೊಡಬೇಕೆಂದು ವಾದಿಸುತ್ತಿದೆ. ಆದರೆ ಇದಕ್ಕೆ ಐಸಿಸಿ ಒಪ್ಪುತ್ತಿಲ್ಲ.

ಒಂದು ವೇಳೆ ತನ್ನ ನಿಲುವನ್ನು ಒಪ್ಪಿಕೊಳ್ಳದಿದ್ದರೆ, ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಬಿಸಿಸಿಐ ಎಚ್ಚರಿಸಿತ್ತು. ಹೀಗಾಗಿ ಇದುವರೆಗೆ ತಂಡವನ್ನೂ ಆಯ್ಕೆ ಮಾಡಿರಲಿಲ್ಲ. ಇದೀಗ ಬಿಸಿಸಿಐ ಆಶಯಕ್ಕೆ ವಿರುದ್ಧವಾಗಿ ಐಸಿಸಿ ನಡೆಯುತ್ತಿರುವುದರಿಂದ ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವುದು ಅನುಮಾನವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ