ರಿಷಭ್ ಪಂತ್ ಎದೆಗಾರಿಕೆ, ವ್ಯಕ್ತಿತ್ವ ಮುಂದಿನ ಪೀಳಿಗೆಗೂ ಸ್ಫೂರ್ತಿ: ಗೌತಮ್ ಗಂಭೀರ್ ಬಿಚ್ಚುಮಾತು

Sampriya

ಸೋಮವಾರ, 28 ಜುಲೈ 2025 (16:05 IST)
Photo Credit X
ನವದೆಹಲಿ: ಬಲಗಾಲಿಗೆ ಬಲವಾದ ಗಾಯವಿದ್ದರೂ ಅದನ್ನೂ ಲೆಕ್ಕಿಸದೆ ಗ್ರೌಂಡ್‌ಗಿಳಿದು ಭಾರತ ಪರ ಅರ್ಧಶತಕ ಸಿಡಿಸಿ, ನಿಜವಾದ ಹೀರೋವಾದ ರಿಷಭ್ ಪಂತ್ ಬಗ್ಗೆ ಭಾರತದ ಕ್ರಿಕೆಟ್ ತಂಡದ ಕೋಚ್ ಗೌತಮ್ ಗಂಬೀರ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. 

ತೀವ್ರವಾದ ಪೆಟ್ಟಿನ ನಡುವೆಯೂ ಕ್ರೀಸ್‌ಗೆ ಕುಂಟುತ್ತಲೇ ಮರಳಿದ ಪಂತ್ ಎದೆಗಾರಿಕೆಗೆ ಕ್ರಿಕೆಟ್ ಪ್ರಿಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು.

 ಭಾರತ ಕ್ರಿಕೆಟ್ ತಂಡಕ್ಕೆ ಸಂಕಷ್ಟದ ಸಮಯದಲ್ಲಿ ತಮ್ಮ ಅವಶ್ಯಕತೆಯನ್ನು ಅರಿತು ಕ್ರೀಸ್‌ಗಿಳಿದ ಪಂತ್ ಧೈರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿ, ಕ್ರಿಕೆಟಿಗ ಧೈರ್ಯಕ್ಕೆ ಸಲಾಂ ಹಾಕಲಾಯಿತು.

ಇದೀಗ ಟೀ ಇಂಡಿಯಾದ ಕೋಚ್ ಗೌತಮ್ ಗಂಭೀರ್ ಅವರು ರಿಷಭ್ ಪಂತ್ ಧೈರ್ಯ ಹಾಗೂ ನಿಮ್ಮ ವ್ಯಕ್ತಿತ್ವ ಮುಂದಿನ ಪೀಳಿಗೆಗೆ ಸ್ಫೂರ್ತಿ ಎಂದು ಕೊಂಡಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಗಂಭೀರ್ ಪಂತ್ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ, ಅವರು ಡ್ರೆಸ್ಸಿಂಗ್ ರೂಮ್‌ನಲ್ಲಿರುವ ಪ್ರತಿಯೊಬ್ಬ ಆಟಗಾರರಿಗೆ ಮಾತ್ರವಲ್ಲದೆ ಮುಂದಿನ ಪೀಳಿಗೆಯ ತಾರೆಗಳಿಗೂ ನೀವು ಸ್ಫೂರ್ತಿ ನೀಡಿದ್ದೀರಿ. ತುಂಬಾ ತುಂಬಾ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದೀರಿ, ನಿಮ್ಮ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತದೆ ಎಂದರು. 



Gautam Gambhir on Rishabh Pant ????
“He’s not just a player, he’s a match-winner. Built different, thinks different.”

He praised him in conference also.#INDvsEND pic.twitter.com/4j3w8apmkW

— Amit Pandey (@crazysailor_) July 28, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ