ಗೌತಮ್ ಗಂಭೀರ್ ನೇಮಿಸುವಾಗ ವಿರಾಟ್ ಕೊಹ್ಲಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಬಿಸಿಸಿಐ

Krishnaveni K

ಗುರುವಾರ, 11 ಜುಲೈ 2024 (11:02 IST)
ಮುಂಬೈ: ಟೀಂ ಇಂಡಿಯಾ ನೂತನ ಕೋಚ್ ಆಗಿ ಗೌತಮ್ ಗಂಭೀರ್ ರನ್ನು ನೇಮಕ ಮಾಡುವ ಮುನ್ನ ತಂಡದ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅಭಿಪ್ರಾಯವನ್ನೇ ಕೇಳಿರಲಿಲ್ಲ ಎಂಬ ಸುದ್ದಿ ಈಗ ಹರಿದಾಡುತ್ತಿದೆ.

ವಿರಾಟ್ ಕೊಹ್ಲಿ ಮತ್ತು ಗಂಭೀರ್ ನಡುವೆ ಈ ಹಿಂದೆ ಹಲವು ಬಾರಿ ಕಿತ್ತಾಟಗಳಾಗಿತ್ತು. ಈಗ ಗಂಭೀರ್ ರನ್ನು ಕೋಚ್ ಆಗಿ ಆಯ್ಕೆ ಮಾಡಿದರೆ ತಂಡದಲ್ಲಿ ಹೊಂದಾಣಿಕೆಯಿರಬಹುದೇ ಎಂಬ ಅನುಮಾನ ಅನೇಕರಿಗಿದೆ. ಕಳೆದ ಬಾರಿ ಐಪಿಎಲ್ ವೇಳೆ ಗಂಭೀರ್ ಮತ್ತು ಕೊಹ್ಲಿ ಪ್ಯಾಚ್ ಅಪ್ ಮಾಡಿಕೊಂಡಿದ್ದರು.

ಆದರೂ ಈ ಹಿಂದಿನ ಘಟನೆಗಳನ್ನು ನೆನದರೆ ಗಂಭೀರ್ ಜೊತೆ ಕೊಹ್ಲಿ ಹೇಗೆ ಹೊಂದಿಕೊಳ್ಳುತ್ತಾರೆ ಎಂಬ ಆತಂಕವಿದೆ. ಈ ನಡುವೆ ಗಂಭೀರ್ ರನ್ನು ಆಯ್ಕೆ ಮಾಡುವ ಮೊದಲು ಬಿಸಿಸಿಐ ಕೊಹ್ಲಿ ಅಭಿಪ್ರಾಯವನ್ನೇ ಕೇಳಿರಲಿಲ್ಲ ಎಂಬ ಮಾತು ಕೇಳಿಬರುತ್ತಿದೆ. ವಿರಾಟ್ ಕೊಹ್ಲಿ ಈಗಾಗಲೇ ಟಿ20 ಕ್ರಿಕೆಟ್ ನಿಂತ ನಿವೃತ್ತರಾಗಿದ್ದಾರೆ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯುವ ಆಟಗಾರರನ್ನು ತಯಾರು ಮಾಡಬಲ್ಲ ಗಂಭೀರ್ ರನ್ನು ಕೋಚ್ ಆಗಿ ನೇಮಿಸಿದೆ.

ಶ್ರೀಲಂಕಾ ವಿರುದ್ಧದ ಸರಣಿ ಗಂಭೀರ್ ಪಾಲಿಗೆ ಕೋಚ್ ಆಗಿ ಮೊದಲ ಸರಣಿಯಾಗಿರಲಿದೆ. ಆದರೆ ಈ ಸರಣಿಯಲ್ಲಿ ಕೊಹ್ಲಿ ಭಾಗಿಯಾಗುತ್ತಿಲ್ಲ ಎಂಬ ವರದಿಗಳಿವೆ. ಕೊಹ್ಲಿ ಮತ್ತು ಗಂಭೀರ್ ಗೆ ತಮ್ಮ ನಡುವಿನ ವೈರುಧ್ಯಗಳನ್ನು ಮಾತನಾಡಿ ಬಗೆಹರಿಸಲು ಎಷ್ಟೋ ಅವಕಾಶಗಳಿವೆ. ಸದ್ಯಕ್ಕೆ ಬಿಸಿಸಿಐ ಇವರಿಬ್ಬರ ವೈಮನಸ್ಯವನ್ನು ಬದಿಗಿಟ್ಟು ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೋಚ್ ಆಯ್ಕೆ ಮಾಡಿದೆ ಎಂದು ಮೂಲಗಳು ಹೇಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ