ಮುಂಬೈ: ಟೀಂ ಇಂಡಿಯಾ ಕೋಚ್ ಆಗಬೇಕೆಂದರೆ ಅದು ಸುಲಭದ ಮಾತಲ್ಲ. ಇಲ್ಲಿ ಕೋಚ್ ಆಗಬೇಕೆಂದರೆ ತಂಡದ ನಾಯಕನ ಒಪ್ಪಿಗೆಯೂ ಬೇಕಾಗುತ್ತದೆ. ಆದರೆ ವಿವಾದಗಳಿಂದ ಸುದ್ದಿಯಾಗುತ್ತಿದ್ದ ಗಂಭೀರ್ ರನ್ನು ಕೋಚ್ ಆಗಿ ಮಾಡಲು ರೋಹಿತ್ ಶರ್ಮಾ ಅನುಮತಿಯಿತ್ತೇ? ಈ ಬಗ್ಗೆ ಇಲ್ಲಿದೆ ವರದಿ.
ರೋಹಿತ್ ಶರ್ಮಾ ಕೊಹ್ಲಿಯಷ್ಟು ವರ್ತನೆಯಲ್ಲಿ ಆಕ್ರಮಣಕಾರೀ ಸ್ವಭಾವದವರಲ್ಲ. ಆದರೆ ಅವರ ಬ್ಯಾಟಿಂಗ್ ಆಕ್ರಮಣಕಾರಿಯಾಗಿರುತ್ತದೆ. ತಮಾಷೆಯಾಗಿಯೇ ತಮ್ಮ ಸಹ ಆಟಗಾರರನ್ನು ತರಾಟೆಗೆ ತೆಗೆದುಕೊಂಡು ತಮಗೆ ಬೇಕಾದ ಫಲಿತಾಂಶ ಪಡೆಯಲೂ ಅವರಿಗೆ ಗೊತ್ತು.
ರೋಹಿತ್ ಶರ್ಮಾ ಯಾವ ಆಟಗಾರನ ಜೊತೆಗೂ ವಿವಾದ ಮಾಡಿಕೊಂಡಿದ್ದಿಲ್ಲ. ಇದೇ ರೀತಿ ಗೌತಮ್ ಗಂಭೀರ್ ಜೊತೆಗೂ ಅವರಿಗೆ ಉತ್ತಮ ಬಾಂಧವ್ಯವಿದೆ. 2007 ರ ಟಿ20 ವಿಶ್ವಕಪ್ ಫೈನಲ್ ಗೆಲ್ಲಲು ಈ ಇಬ್ಬರ ಜೋಡಿಯೇ ಭಾರತದ ಬ್ಯಾಟಿಂಗ್ ಗೆ ಆಧಾರವಾಗಿದ್ದು. ಅಂದಿನಿಂದಲೂ ಇಬ್ಬರ ನಡುವೆ ಬಾಂಧವ್ಯವಿದೆ.
ರಾಹುಲ್ ದ್ರಾವಿಡ್ ಕೋಚ್ ಸ್ಥಾನದಲ್ಲಿ ಮುಂದುವರಿಯಲು ನಿರಾಕರಿಸಿದಾಗ ಗೌತಮ್ ಗಂಭೀರ್ ಹೆಸರು ಚರ್ಚೆಗೆ ಬಂತು. ಈ ವೇಳೆ ಸ್ವತಃ ರೋಹಿತ್ ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಗಂಭೀರ್ ರನ್ನೇ ಆಯ್ಕೆ ಮಾಡಲು ಜಯ್ ಶಾಗೆ ಒಪ್ಪಿಗೆ ಸೂಚಿಸಿದರಂತೆ. ಈ ಕಾರಣಕ್ಕೆ ಗಂಭೀರ್ ರನ್ನೇ ಆಯ್ಕೆ ಮಾಡಲಾಯಿತು ಎನ್ನಲಾಗಿದೆ.