ಕೊರೋನಾ ಕಾಟದಿಂದ ಬಿಸಿಸಿಐ ಕಚೇರಿಗೇ ಬೀಗ

ಶನಿವಾರ, 8 ಜನವರಿ 2022 (10:41 IST)
ಮುಂಬೈ: ದೇಶದೆಲ್ಲೆಡೆ ಮತ್ತೆ ಕೊರೋನಾ ಆರ್ಭಟ ಶುರುವಾಗಿದೆ. ಇದೀಗ ಭಾರತೀಯ ಕ್ರಿಕೆಟ್ ಮಂಡಳಿಯ ಮುಂಬೈನ ಕೇಂದ್ರ ಕಚೇರಿ ಕೊರೋನಾದಿಂದಾಗಿ ಬಂದ್ ಆಗಿದೆ.

ಮುಂಬೈ ಕಚೇರಿಯ ಬಹುತೇಕ ಸಿಬ್ಬಂದಿಗಳಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿದ್ದು, ಈ ಕಾರಣಕ್ಕೆ ಕಚೇರಿಗೇ ಬೀಗ ಹಾಕಲಾಗಿದೆ.

ಇತ್ತೀಚೆಗಷ್ಟೇ ಬಿಸಿಸಿಐ ಅಧ‍್ಯಕ್ಷ ಸೌರವ್ ಗಂಗೂಲಿಗೆ ಕೊರೋನಾ ಸೋಂಕು ತಗುಲಿತ್ತು.  ಬಿಸಿಸಿಐ ಕಚೇರಿಯಲ್ಲಿನ ಮೂವರಿಗೆ ಮತ್ತು ಅಲ್ಲಿಯೇ ಪಕ್ಕದಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಮಂಡಳಿಯ ಬಹುತೇಕ ಸದಸ್ಯರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ