ಹೃದಯ ಗೆದ್ದ ಮಹಿಳೆಯರ ಅದ್ಧೂರಿ ಸ್ವಾಗತಕ್ಕೆ ಬಿಸಿಸಿಐ ಪ್ಲ್ಯಾನ್ !

ಸೋಮವಾರ, 24 ಜುಲೈ 2017 (14:00 IST)
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ನಲ್ಲಿ ಫೈನಲ್ ಸೋತರೂ, ಅದ್ಭುತವಾಗಿ ಹೋರಾಡಿದ ಮಹಿಳಾ ಕ್ರಿಕೆಟರುಗಳ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಬಿಸಿಸಿಐ ಇವರ ಸ್ವಾಗತಕ್ಕೆ ಸಕಲ ತಯಾರಿ ನಡೆಸಿದೆ.


ಬುಧವಾರದಿಂದ ತಂಡ ತಂಡವಾಗಿ ಭಾರತೀಯ ಮಹಿಳಾ ಕ್ರಿಕೆಟಿಗರು ತವರಿಗೆ ಮರಳಲಿದ್ದಾರೆ. ಹೀಗಾಗಿ ಎಲ್ಲಾ ಆಟಗಾರರೂ ತವರಿಗೆ ಬಂದ ಮೇಲೆ ಆಟಗಾರರ ಲಭ್ಯತೆ ನೋಡಿಕೊಂಡು ಸನ್ಮಾನ ಸಮಾರಂಭ ಏರ್ಪಡಿಸಲು ಬಿಸಿಸಿಐ ಸಿದ್ಧತೆ ನಡೆಸಿದೆ. ಆದರೆ ಎಲ್ಲಿ ಯಾವಾಗ ಎನ್ನುವುದು ಇನ್ನೂ ಫೈನಲ್ ಆಗಿಲ್ಲ.

ಇದೇ ಸಮಾರಂಭದಲ್ಲಿ ಬಿಸಿಸಿಐ ಈಗಾಗಲೇ ಘೋಷಿಸಿದ ಬಹುಮಾನ ಮೊತ್ತ 50 ಲಕ್ಷ ರೂ. ಗಳ ಚೆಕ್ ನ್ನು ವಿತರಿಸುವ ಸಾಧ್ಯೆಯಿದೆ. ಸಹಾಯಕ ಸಿಬ್ಬಂದಿಗಳಿಗೆ 25 ಲಕ್ಷ ರೂ. ನಗದು ಬಹುಮಾನ ಸಿಗಲಿದೆ. ಕಪ್ ಸೋತರೂ ಹೃದಯ ಗೆದ್ದ ಭಾರತೀಯ ಮಹಿಳಾ ಕ್ರಿಕೆಟರುಗಳ ಸಾಧನೆಗೆ ಪ್ರಧಾನಿ ಮೋದಿ, ಬಿಸಿಸಿಐ ಸೇರಿದಂತೆ ಕೋಟ್ಯಂತರ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ..  ಕಾರ್ಗಿಲ್ ಯುದ್ಧದಲ್ಲಿ ಕೂದಲೆಳೆಯಲ್ಲಿ ಪ್ರಾಣ ಉಳಿಸಿಕೊಂಡಿದ್ದ ಮುಷರಫ್, ನವಾಜ್ ಷರೀಫ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ