ಮುಂಬೈ: ಯುಎಇನಲ್ಲಿ ಈ ವರ್ಷದ ಐಪಿಎಲ್ ಆವೃತ್ತಿ ಆಯೋಜಿಸುವುದಾಗಿ ಬಿಸಿಸಿಐ ಹೇಳಿಕೊಂಡು ಬಂದಿದ್ದರೂ ಇದುವರೆಗೆ ಅಲ್ಲಿನ ಕ್ರಿಕೆಟ್ ಮಂಡಳಿಗೆ ಅಧಿಕೃತ ಪತ್ರ ನೀಡಿರಲಿಲ್ಲ. ಆದರೆ ಈಗ ಬಿಸಿಸಿಐ ಮನವಿ ಪತ್ರ ಕಳುಹಿಸಿರುವುದನ್ನು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಖಚಿತಪಡಿಸಿದ್ದಾರೆ.
‘ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ಗೆ ಪತ್ರ ಬರೆದು ಐಪಿಎಲ್ ಆಯೋಜಿಸಲು ಅನುಮತಿ ನೀಡಿರುವ ಬಗ್ಗೆ ಅಧಿಕೃತ ಪತ್ರ ಬರೆದಿದ್ದೇವೆ. ಇನ್ನು ಮುಂದೆ ಉಭಯ ಮಂಡಳಿಗಳು ಒಟ್ಟಾಗಿ ಕೆಲಸ ಮಾಡಲಿವೆ’ ಎಂದು ಬ್ರಿಜೇಶ್ ಪಟೇಲ್ ಹೇಳಿದ್ದಾರೆ.
ಎಲ್ಲಾ ತಂಡಗಳೂ ಯುಎಇನಲ್ಲೇ ತರಬೇತಿ ಕ್ಯಾಂಪ್ ಆಯೋಜಿಸಲಿವೆ. ಅಲ್ಲಿ ಇದಕ್ಕಾಗಿ ಸುರಕ್ಷಿತ ತಾಣವನ್ನು ಗುರುತಿಸಲಾಗುತ್ತದೆ ಎಂದು ಅವರು ಖಚಿತಪಡಿಸಿದ್ದಾರೆ.