ಐಪಿಎಲ್: ಆಟಗಾರರ ಜತೆ ಸಾಮಾನು ಸಾಗಾಟವೇ ದೊಡ್ಡ ತಲೆನೋವು

ಭಾನುವಾರ, 26 ಜುಲೈ 2020 (13:35 IST)
ಮುಂಬೈ: ಐಪಿಎಲ್ 13 ನ್ನು ಯುಎಇನಲ್ಲಿ ಆಯೋಜಿಸಲು ಬಿಸಿಸಿಐ ಸಿದ್ಧತೆಯೇನೋ ನಡೆಸಿದೆ. ಆದರೆ ಇಲ್ಲಿಗೆ ಆಟಗಾರರು, ಅಧಿಕಾರಿಗಳು, ಅವರ ಪರಿಕರಗಳನ್ನು ಹೊತ್ತೊಯ್ಯುವುದೇ ಈಗ ದೊಡ್ಡ ತಲೆನೋವಾಗಿದೆ.


ಕೊರೋನಾದಿಂದಾಗಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಮೊದಲಿನಂತಿಲ್ಲ. ಹೀಗಾಗಿ ಐಪಿಎಲ್ ಆಟಗಾರರನ್ನು ಯುಎಇಗೆ ಕರೆದೊಯ್ಯಲು ವಿಮಾನಗಳನ್ನು ಬಾಡಿಗೆ ಪಡೆಯಲು ಫ‍್ರಾಂಚೈಸಿಗಳು ಚಿಂತನೆ ಮಾಡಿವೆ.

ಇದರ ಜತೆಗೆ ಮ್ಯಾಚ್ ಅಧಿಕಾರಿಗಳು, ಕ್ರಿಕೆಟ್ ಪರಿಕರಗಳನ್ನು ಸಾಗಿಸಲು ವಿಮಾನಗಳ ವ್ಯವಸ್ಥೆಯಾಗ ಬೇಕಿದೆ. ಅಲ್ಲದೆ, ಯುಎಇಗೆ ತೆರಳಿದ ಮೇಲೆ ಸುರಕ್ಷಿತ ಸ್ಥಳಗಳಲ್ಲಿ ಇರುವುದು, ಆಟಗಾರರನ್ನು ಕ್ವಾರಂಟೈನ್ ನಲ್ಲಿರಿಸುವುದು ಇತ್ಯಾದಿ ವ್ಯವಸ್ಥೇಯಾಗಬೇಕಿದೆ. ಹೀಗಾಗಿ ಐಪಿಎಲ್ 13 ಆಯೋಜಿಸುವುದು ಬಿಸಿಸಿಐಗೆ ದೊಡ್ಡ ಸಾಹಸವೇ ಆಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ