ಭಾರತೀಯ ಕ್ರಿಕೆಟಿಗರಿಗೆ ಕಣ್ಣು ಪರೀಕ್ಷೆ ಮಾಡಲಿರುವ ಬಿಸಿಸಿಐ
ಬುಧವಾರ, 3 ಜೂನ್ 2020 (10:03 IST)
ಮುಂಬೈ: ಕೊರೋನಾದಿಂದಾಗಿ ಸುದೀರ್ಘ ಕಾಲ ಕ್ರಿಕೆಟ್ ನಿಂದ ದೂರವಿರುವ ಕ್ರಿಕೆಟಿಗರಿಗೆ ಬಿಸಿಸಿಐ ಫಿಟ್ನೆಸ್ ಕಾಯ್ದುಕೊಳ್ಳಲು ತರಬೇತಿ ಕ್ಯಾಂಪ್ ಆಯೋಜಿಸುವ ಜತೆಗೆ ಕಣ್ಣಿನ ಪರೀಕ್ಷೆ ನಡೆಸಲು ತಯಾರಿ ನಡೆಸಿದೆ.
ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾದ ಎಲ್ಲಾ ಕ್ರಿಕೆಟಿಗರೂ ಈ ಕಡ್ಡಾಯ ಕಣ್ಣು ಪರೀಕ್ಷೆಗೊಳಗಾಗಲಿದ್ದಾರೆ. ಕಣ್ಣಿನಲ್ಲಿ ಏನಾದರೂ ಸಮಸ್ಯೆಯಿದ್ದರೆ ಅದಕ್ಕೆ ಸೂಕ್ತ ಕನ್ನಡಕ ಅಥವಾ ವೈದ್ಯರು ಸೂಚಿಸುವ ಪರಿಹಾರ ಕ್ರಮ ಮಾಡಿಕೊಳ್ಳಬೇಕಾಗುತ್ತದೆ.
ಕ್ರಿಕೆಟಿಗರಿಗೆ ವೇಗದ ಎಸೆತಗಳನ್ನು ಎದುರಿಸಲು ಕಣ್ಣು ಚುರುಕಾಗಿರಬೇಕು. ಹೀಗಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಇದು ಹಲವು ಸಮಯದಿಂದಲೂ ನಡೆದುಕೊಂಡು ಬರುತ್ತಿದೆ. ಇದರಲ್ಲಿ ವಿಶೇಷವೇನೂ ಇಲ್ಲ ಎಂದು ಬಿಸಿಸಿಐ ಹೇಳಿಕೊಂಡಿದೆ.