Bengaluru Rain: ಇಂದಿನ KKR vs RCB ಪಂದ್ಯಾಟದ ಟಿಕೆಟ್ ಖರೀದಿಸಿದವರಿಗೆ ಬಿಗ್ ಶಾಕ್‌

Sampriya

ಶನಿವಾರ, 17 ಮೇ 2025 (19:05 IST)
Photo Credit X
ಬೆಂಗಳೂರು: ಕಳೆದ ಕೆಲ ಗಂಟೆಗಳಿಂದ ನಿರಂತರವಾಗಿ ಬೆಂಗಳೂರಿನಲ್ಲಿ ಸುರಿದ ಮಳೆಗೆ ಭಾರೀ ಟ್ರಾಫಿಕ್ ಜಾಮ್ ಆಗಿದೆ. ಇದೀಗ ಮಳೆಯ ಪರಿಣಾಮ ಇಂದು ನಡೆಯುವ ಕೆಕೆಆರ್‌ ಹಾಗೂ ಆರ್‌ಸಿಬಿ ಪಂದ್ಯಾಟಕ್ಕೂ ಬಿಸಿ ಮುಟ್ಟುವ ಸಾಧ್ಯತೆಯಿದೆ.

ಕೆಲ ಗಂಟೆಗಳಿಂದ ಬೆಂಗಳೂರಿನ ಹಲವೆಡೆ ನಿರಂತರ ಮಳೆಯಾಗಿದೆ. ಇನ್ನೂ ಪಂದ್ಯಾಟವಿರುವುದರಿಂದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ವಾಹನ ದಟ್ಟನೆ ಹೆಚ್ಚಾಗಿ, ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಯಿತು.

ಮಳೆಯಿಂದಾಗಿ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯಾಟ ವಿಳಂಭವಾಗುವ ಸಾಧ್ಯತೆಯಿದೆ. ಇದರಿಂದ ಇಂದಿನ ಪಂದ್ಯಾಟ ನೋಡಲು ಟಿಕೆಟ್ ಖರೀದಿಸಿದವರಿಗೆ ತಲೆ ಬಿಸಿ ಶುರುವಾಗಿದೆ.

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ನಡೆದ ಆಫರೇಷನ್ ಸಿಂಧೂರ್ ಬಳಿಕ ಐಪಿಎಲ್‌ 2025ಕ್ಕೆ ತಾತ್ಕಾಲಿಕ ತಡೆ ನೀಡಲಾಗಿತ್ತು. ಇದೀಗ ಮತ್ತೇ ಐಪಿಎಲ್‌ ಪುನರ್ ಆರಂಭಗೊಂಡಿದ್ದು, ಇಂದು ಮೊದಲ ಪಂದ್ಯಾಟವನ್ನು ಬೆಂಗಳೂರಿನಲ್ಲಿ ಕೆಕೆಆರ್‌ ಹಾಗೂ ಆರ್‌ಸಿಬಿ ವಿರುದ್ಧ ನಡೆಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ