RCB vs KKR match: ಚಿನ್ನಸ್ವಾಮಿಯಲ್ಲಿಂದು ಪಂದ್ಯ ನಡೆಯವುದೇ ಅನುಮಾನ

Krishnaveni K

ಶನಿವಾರ, 17 ಮೇ 2025 (09:42 IST)
ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷದ ವಾತಾವರಣದಿಂದಾಗಿ ಅರ್ಧಕ್ಕೇ ನಿಂತಿದ್ದ ಐಪಿಎಲ್ ಪಂದ್ಯಗಳು ಇಂದಿನಿಂದ ಪುನರಾರಂಭಗೊಳ್ಳಲಿದೆ. ಆದರೆ ಇಂದು ಚಿನ್ನಸ್ವಾಮಿಯಲ್ಲಿ ಆರ್ ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯ ನಡೆಯುವುದೇ ಅನುಮಾನವಾಗಿದೆ.

ಐಪಿಎಲ್ 2025 ರ ಎರಡನೇ ಹಂತದ ಪಂದ್ಯ ಇಂದು ಆರಂಭವಾಗಲಿದೆ. ಮೊದಲ ಪಂದ್ಯ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಎರಡನೇ ಹಂತದಲ್ಲಿ ಒಟ್ಟು 6 ಮೈದಾನಗಳಲ್ಲಿ ಪಂದ್ಯ ನಡೆಯುವುದು. ಆದರೆ ಇಂದಿನ ಪಂದ್ಯಕ್ಕೆ ಮಳೆಯ ಆತಂಕವಿದೆ.

ಬೆಂಗಳೂರಿನಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ವಿಶೇಷವಾಗಿ ಸಂಜೆ ವೇಳೆ ಭಾರೀ ಮಳೆಯಾಗುತ್ತಿದ್ದು, ಇಂದೂ ಕೂಡಾ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.

ಹೀಗಾಗಿ ಇಂದು ಭಾರೀ ಮಳೆಯಾಗಿ ಪಂದ್ಯಕ್ಕೆ ಅಡ್ಡಿಯಾಗಬಹುದೇನೋ ಎಂಬ ಆತಂಕ ಅಭಿಮಾನಿಗಳಲ್ಲಿದೆ. ರೋಚಕ ಘಟ್ಟದಲ್ಲಿರುವಾಗ ಪಂದ್ಯ ನಡೆಯದೇ ಇದ್ದಲ್ಲಿ ಅಭಿಮಾನಿಗಳಿಗೆ ನಿರಾಸೆಯಾಗುವುದು ಸಹಜ. ಹೀಗಾಗಿ ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗದಿರಲಿ ಎಂದು ಫ್ಯಾನ್ಸ್ ಪ್ರಾರ್ಥಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ