ಕ್ರೀಡಾ ಪ್ರಶಸ್ತಿ ಸಮಾರಂಭಕ್ಕೆ ಗೈರಾಗಲಿರುವ ರವೀಂದ್ರ ಜಡೇಜಾ, ಭಜರಂಗ್ ಪೂನಿಯಾ

ಗುರುವಾರ, 29 ಆಗಸ್ಟ್ 2019 (10:48 IST)
ನವದೆಹಲಿ: ಇಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಾರಂಭಕ್ಕೆ ಕ್ರಿಕೆಟಿಗ ರವೀಂದ್ರ ಜಡೇಜಾ ಮತ್ತು ಕುಸ್ತಿಪಟು ಭಜರಂಗ್ ಪೂನಿಯಾ ಗೈರಾಗಲಿದ್ದಾರೆ.


ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಗಾಗಿ ತೆರಳಿರುವುದರಿಂದ ಜಡೇಜಾ ಗೈರು ಹಾಜರಾಗಲಿದ್ದಾರೆ. ಇನ್ನು ಮುಂಬರುವ ವಿಶ್ವಚಾಂಪಿಯನ್ ಶಿಪ್ ಕುಸ್ತಿ ಪಂದ್ಯಾವಳಿಗಾಗಿ ರಷ್ಯಾದಲ್ಲಿ ತರಬೇತಿ ಪಡೆಯುತ್ತಿರುವ ಕಾರಣಕ್ಕೆ ಭಜರಂಗ್ ಪೂನಿಯಾ ಸಮಾರಂಭ ತಪ್ಪಿಸಿಕೊಳ್ಳಲಿದ್ದಾರೆ.

ಜಡೇಜಾ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರೆ, ಪೂನಿಯಾ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇಂದು ರಾಷ್ಟ್ರಪತಿಗಳಿಂದ ಪ್ರಶಸ್ತಿ ವಿಜೇತರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಇಂದು ಸಮಾರಂಭಕ್ಕೆ ಗೈರು ಹಾಜರಾದ ಕ್ರೀಡಾಳುಗಳು ತವರಿಗೆ ವಾಪಸಾದ ಬಳಿಕ ಕ್ರೀಡಾ ಸಚಿವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ