ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಆಗಿ ಭರತ್ ಅರುಣ್ ನೇಮಕ

ಮಂಗಳವಾರ, 18 ಜುಲೈ 2017 (16:11 IST)
ಅಂತೂ ಇಂತೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಠದಿಂದ ನೇಮಕವಾದ ಹೆಡ್ ಕೋಚ್ ರವಿಶಾಸ್ತ್ರೀ ಹಠವೂ ನೆರವೇರಿದೆ. ರವಿಶಾಸ್ತ್ರೀ ಬೇಡಿಕೆಯಂತೆ ಭರತ್ ಅರುಣ್ ಅವರನ್ನ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ.ಭರತ್ ಅರುಣ್ ಅವರನ್ನ ನೇಮಕ ಮಾಡಿ ಬಿಸಿಸಿಐ ಪ್ರಕಟಣೆ ಹೊರಡಿಸಿದೆ ಎಂದು ಕಾರ್ಯದರ್ಶಿ ಅಮಿತಾಬ್ ಚೌಧರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
.

ನಿಯೋಜಿತ ಬಿಸಿಸಿಐ ಅಧ್ಯಕ್ಷ ಸಿ.ಕೆ. ಖನ್ನಾ, ಕಾರ್ಯದರ್ಶಿ ಅಮಿತಾಬ್ ಚೌಧರಿ ಮತ್ತು ಆಡಳಿತ ಮಂಡಳಿ ಸದಸ್ಯ ಡಿಯಾನಾ ಎಡುಲ್ಜಿ ಮುಂಬೈನ ಮುಖ್ಯ ಕಚೇರಿಯಲ್ಲಿ ಸಭೆ ನಡೆಸಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ. ಸಂಜಯ್ ಬಂಗಾರ್ ಮತ್ತು ಆರ್. ಶ್ರೀಧರ್ ಕ್ರಮವಾಗಿ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಕೋಚ್ ಆಗಿ ಮುಂದುವರೆಯಲಿದ್ದಾರೆ. ಭರತ್ ಅರುಣ್ ಫೂರ್ನಾವಧಿ ಬೌಲಿಂಗ್ ಕೋಚ್ ಆಗಿರಲಿದ್ದು, ಜಹೀರ್ ಖಾನ್ 150 ದಿನ ಮಾತ್ರ ಲಭ್ಯವಿರಲಿದ್ದಾರೆ.

54 ವರ್ಷದ ಭರತ್ ಅರುಣ್ 2014-16ರಲ್ಲಿ ರವಿಶಾಸ್ತ್ರೀ ಟೀಮ್ ಇಂಡಿಯಾ ಡೈರೆಕ್ಟರ್ ಆಗಿದ್ದ ಸಂದರ್ಭ ಟೀಮ್ ಇಂಡಿಯಾ ಜೊತೆ ಕಾರ್ಯನಿರ್ವಹಿಸಿದ್ದರು. ಅಂಡರ್-19 ತಂಡದಲ್ಲಿ ಭರತ್ ಅರುಣ್ ಅವರು ರವಿಶಾಸ್ತ್ರೀ ಟೀಮ್ ಮೇಟ್ ಕೂಡ ಹೌದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ