ರಾಜಸ್ಥಾನ್ ರಾಯಲ್ಸ್ ತೊರೆದ ರಾಹುಲ್ ದ್ರಾವಿಡ್: ಈ ತಂಡಕ್ಕೆ ಕೋಚ್ ಆಗಲಿ ಅಂತಿದ್ದಾರೆ ಫ್ಯಾನ್ಸ್
ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಟಿ20 ವಿಶ್ವಕಪ್ ಗೆದ್ದುಕೊಟ್ಟ ರಾಹುಲ್ ದ್ರಾವಿಡ್ ಬಳಿಕ ರಾಷ್ಟ್ರೀಯ ತಂಡಕ್ಕೆ ಗುಡ್ ಬೈ ಹೇಳಿದ್ದರು. ಇದರ ಬೆನ್ನಲ್ಲೇ ರಾಜಸ್ಥಾನ್ ರಾಯಲ್ಸ್ ಅವರನ್ನು ತಂಡದ ಮುಖ್ಯ ಕೋಚ್ ಆಗಿ ನೇಮಿಸಿತ್ತು.
ಆದರೆ ರಾಹುಲ್ ದ್ರಾವಿಡ್-ಸಂಜು ಸ್ಯಾಮ್ಸನ್ ಕಾಂಬಿನೇಷನ್ ರಾಜಸ್ಥಾನ್ ಗೆ ವರ್ಕೌಟ್ ಆಗಲಿಲ್ಲ. ಅಂಕಪಟ್ಟಿಯಲ್ಲಿ 9 ನೇ ಸ್ಥಾನಕ್ಕೆ ಜಾರಿತ್ತು. ಹೀಗಾಗಿ ನಾಯಕ ಮತ್ತು ಕೋಚ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗಳೂ ಇದ್ದವು. ಇದೀಗ ರಾಹುಲ್ ದ್ರಾವಿಡ್ ಕೋಚ್ ಹುದ್ದೆಯಿಂದ ನಿರ್ಗಮಿಸಿದ್ದು ಆ ಅನುಮಾನಗಳಿಗೆ ಪುಷ್ಠಿ ನೀಡುವಂತಿದೆ.
ಇದೀಗ ದ್ರಾವಿಡ್ ಆರ್ ಆರ್ ತಂಡ ಬಿಟ್ಟ ಬೆನ್ನಲ್ಲೇ ಫ್ಯಾನ್ಸ್ ಈ ತಂಡಕ್ಕೆ ಬನ್ನಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು ಮುಂಬೈಗೆ ಬನ್ನಿ ಅಂತಿದ್ದಾರೆ. ಇತ್ತ ಕೆಕೆಆರ್ ತಂಡದ ಅಭಿಮಾನಿಗಳೂ ಈ ತಂಡಕ್ಕೆ ಬರಲಿ ಎನ್ನುತ್ತಿದ್ದಾರೆ. ರಾಹುಲ್ ದ್ರಾವಿಡ್ ಮುಂದಿನ ನಡೆಯೇನು ಎಂದು ಕಾದುನೋಡಬೇಕಿದೆ.